Malenadu Mitra
ರಾಜ್ಯ ಶಿವಮೊಗ್ಗ

ನಾಪತ್ತೆಯಾಗಿದ್ದ ಗಿರಿರಾಜ್ ಸಿಕ್ಕಿದ್ದು ಹೇಗೆ ಗೊತ್ತಾ ?

ಕೆಲಸದ ಒತ್ತಡ, ಮೇಲಧಿಕಾರಿ ದಬ್ಬಾಳಿಕೆ ಇತ್ಯಾದಿ ಕಾರಣ ಕೊಟ್ಟು ನಾಪತ್ತೆಯಾಗಿ ಶಿವಮೊಗ್ಗ ಮತ್ತು ಸರಕಾರಿ ನೌಕರರ ವಲಯದಲ್ಲಿ ಸಂಚಲನ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ಸಿಕ್ಕಿದ್ದು ಹೇಗೆ ಗೊತ್ತಾ ? , ಕಳೆದ ವಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಹಾಕಿ ನಾಪತ್ತೆಯಾಗಿದ್ದ ಗಿರಿರಾಜ್ ಗುರುವಾರ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.
ನಿರಂಜನ್ ಎನ್ನುವ ವ್ಯಕ್ತಿ ಧರ್ಮಸ್ಥಳದಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಬಿದ್ದಿರುವುದನ್ನು ನೋಡಿದ್ದಾರೆ. ಸುದ್ದಿ ಮಾದ್ಯಮಗಳಲ್ಲಿ ಬಂದಿದ್ದ ಗಿರಿರಾಜ್ ಹೋಲುವಂತೆ ಕಂಡಿದ್ದರಿಂದ ನಿರಂಜನ್ ಅವರು ನೀವು ಶಿವಮೊಗ್ಗ ಡಿಸಿ ಕಚೇರಿಯ ಗಿರಿರಾಜ್ ಅಲ್ವಾ ಎಂದು ಕೇಳಿದ್ದಾರೆ. ಆತ ಹೌದು ಎಂದು ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ನಿರಂಜನ್ ಅವರಿಂದಲೇ ಮನೆಯವರಿಗೆ ಮಾತನಾಡಿಸಿದ್ದಾರೆ. ಮತ್ತು ಸ್ಥಳೀಯ ನೌಕರರ ಸಂಘದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಉಜಿರೆಯ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ.
ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಬಳಲಿರುವ ಅವರಿಗೆ ಅನಾರೋಗ್ಯವೂ ಇದೆ. ಈ ಕಾರಣದಿಂದ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದಿರುವ ನೌಕರರ ಸಂಘದವರು ಶಿವಮೊಗ್ಗಕ್ಕೆ ಮಾಹಿತಿ ನೀಡಿದ್ದಾರೆ. ನಾಪತ್ತೆ ಕೇಸು ದಾಖಲಿಸಿರುವ ಜಯನಗರ ಪೊಲೀಸರು ಉಜಿರೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಂಚಲನ:


ಶಿಸ್ತಿನ ಕೆಲಸಗಾರ ಎಂದೇ ಹೆಸರಾಗಿದ್ದ ಗಿರಿರಾಜ್ ಪ್ರಾಮಾಣಿಕರೂ ಕೂಡಾ ಆಗಿದ್ದರು. ಯೋಗ ಪಟುವೂ ಆಗಿದ್ದ ಅವರು, ಆತ್ಮಹತ್ಯೆ ವಿಷಯ ಪ್ರಸ್ತಾಪಿಸಿದಾಗ ಶಿವಮೊಗ್ಗ ನೌಕರವಲಯದಲ್ಲಿ ಒಂದು ರೀತಿಯ ಸಂಚಲನೇ ಉಂಟಾಗಿತ್ತು. ಕಾಣೆಯಾದಾಗಿನಿಂದ ಇಲ್ಲಿನ ಪೊಲೀಸರು ಕಂಡ ಕಂಡಲ್ಲಿ ಹುಡುಕಾಟ ನಡೆಸಿದ್ದರು. ಅನಾಮದೇಯ ಶವ ಕಂಡರೂ ಹೋಗಿ ನೋಡುತ್ತಿದ್ದರು. ಗಿರಿರಾಜ್ ಪತ್ತೆಯಾಗಿರುವುದು ಅಧಿಕಾರಿಗಳಿಗೆ ನಿಟ್ಟುಸಿರು ಬಿಡುವಂತಾಗಿದೆ. ಅವರಿಗೆ ಸೂಕ್ತ ಆರೈಕೆ ಮಾಡುವ ಅಗತ್ಯವಿದೆ. ಮತ್ತು ಒಬ್ಬ ಪ್ರಾಮಾಣಿಕ ನೌಕರ ಅಧಿಕಾರಿಗಳ ಒತ್ತಡದ ಕಾರಣಕ್ಕಾಗಿ ಆತ್ಮಹತ್ಯೆಯಂತಹ ನಿರ್ಣಯ ತೆಗೆದುಕೊಳ್ಳುವ ಮಟ್ಟಕ್ಕೆ ಹದಗೆಟ್ಟಿರುವ ಆಡಿಳಿತ ವ್ಯವಸ್ಥೆಗೂ ಸೂಕ್ತ ಚಿಕಿತ್ಸೆ ಆಗುವ ಅಗತ್ಯವಿದೆ.

Ad Widget

Related posts

ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಗೋಪಾಲ್ ಯಡಗೆರೆ ಅಧ್ಯಕ್ಷ, ಸಂತೋಷ್ ಪ್ರಧಾನ ಕಾರ್ಯದರ್ಶಿ

Malenadu Mirror Desk

ಭದ್ರಾವತಿಯಲ್ಲಿ ಕೆಜಿಗಟ್ಟಲೇ ಗಾಂಜಾ ವಶ : ಮೂವರ ಬಂಧನ

Malenadu Mirror Desk

ಸಿನಿಮಾ ಎನ್ನುವುದು ಸಿನಿ ಕಲಾವಿದರಿಗೆ ತಾಯಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.