Malenadu Mitra
ರಾಜ್ಯ ಶಿವಮೊಗ್ಗ

ವಿಧಾನ ಸಭೆಗೆ ಸ್ಪರ್ಧಿಸಲ್ಲ: ಸಂಸದ

ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗದೆ ಎಂಟು ತಾಲೂಕಿಗೆ ಸೇವೆ ಮಾಡುವ ಅವಕಾಶ ಹಾಗೂ ಆಶೀರ್ವಾದ ಜನ ಮಾಡಿದ್ದಾರೆ. ಹಾಗಾಗಿ, ನಾನು ಲೋಕಸಭಾ ಸದಸ್ಯನಾಗಿಯೇ ಸೇವೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಸಿಯಲ್ಲಿ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರ ಕುರಿತು ಸ್ಪಷ್ಟನೆ ನೀಡಿದರು. ಜನ ನನಗೆ ಆಶೀರ್ವಾದ ಮಾಡಿ ಮೂರು ಬಾರಿ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಆ ದಿಕ್ಕಿನಲ್ಲಿಯೇ ಮುಂದುವರಿಯುವ ಅಪೇಕ್ಷೆ ಇದೆ ಎಂದರು.
ವಿಜಯೇಂದ್ರ ಜನಪ್ರತಿನಿಧಿಯಾಗಿ ಗುರುತಿಸಿಕೊಳ್ಳದೇ ತನ್ನ ಪಾಡಿಗೆ ತಾನು ಸಂಘಟನೆಯ ಕೆಲಸ ಮಾಡುತ್ತಿದ್ದಾನೆ ಬಿಜೆಪಿ ಸರ್ಕಾರದಲ್ಲಿ ವಿಜಯೇಂದ್ರ ಅವರಿಗೆ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆಯಾಗುತ್ತಿರುವ ಕುರಿತು ಯಡಿಯೂರಪ್ಪನವರಾಗಿರಲಿ, ವಿಜಯೇಂದ್ರ ಆಗಲಿ ಎಲ್ಲಿಯೂ ಈ ಕುರಿತು ಹೇಳಿಕೊಂಡಿಲ್ಲ. ಅಪೇಕ್ಷೇನೂ ಪಟ್ಟಿಲ್ಲ, ವಿಜಯೇಂದ್ರ ಅವನ ಪಾಡಿಗೆ ಅವನು ಸಂಘಟನೆಯಲ್ಲಿ ಸಂಘಟನೆಯ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು

ಐಟಿ ದಾಳಿಗೂ ಸಂಬಂಧ ಇಲ್ಲ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಉಮೇಶ ಮನೆಯ ಮೇಲಿನ ಐಟಿ ದಾಳಿಯ ಕುರಿತು ಮಾತನಾಡಿದ ಅವರು, ಐಟಿ ದಾಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ. ಉಮೇಶ್ ಅವರು ಅನೇಕ ವರ್ಷಗಳಿಂದ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ತನಿಖೆ ನಡೆಯುತ್ತಿದೆ, ಐಟಿ ಅಧಿಕಾರಿಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು.

Ad Widget

Related posts

ರಕ್ತದಾನ ಮಾಡುವ ಮೂಲಕ ರಕ್ತದಾನಿಗಳ ದಿನಾಚರಣೆ ಮಾಡಿದ ಡಾ.ರಾಜನಂದಿನಿ ಕಾಗೋಡು

Malenadu Mirror Desk

ಮಲೆನಾಡಿನ ನೋ ನೆಟ್‍ವರ್ಕ್, ನೋ ವೋಟಿಂಗ್ ಅಭಿಯಾನಕ್ಕೆ ಬೆಂಬಲ: ಬೇಳೂರು ಗೋಪಾಲಕೃಷ್ಣ

Malenadu Mirror Desk

ಹರಿಹರಪುರದಲ್ಲಿ ಏ.10 ರಿಂದ ಐತಿಹಾಸಿಕ ಕುಂಭಾಭಿಷೇಕ
ಧಾರ್ಮಿಕ ಸಭೆ, ಹಲವು ಸ್ವಾಮೀಜಿಗಳು ಭಾಗಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.