Malenadu Mitra
ರಾಜ್ಯ ಶಿವಮೊಗ್ಗ

ಸೊರಬದಲ್ಲಿ ದಸರಾ ಉತ್ಸವಕ್ಕೆ ಭವ್ಯ ತೆರೆ

ಸೊರಬ ಸಾರ್ವಜನಿಕ ದಸರಾ ಉತ್ಸವ ಮೆರವಣಿಗೆಯು ಜನಪದ ಕಲಾಮೇಳಗಳೊಂದಿಗೆ ರಂಗನಾಥ ದೇವಸ್ಥಾನದಿಂದ ಬಯಲು ಬಸವೇಶ್ವರ ದೇವರ ಆವರಣದಲ್ಲಿರುವ ಬನ್ನಿಮರದ ವರೆಗೆ ತೆರಳಿ ಬನ್ನಿ ಮುಡಿಯುವ ಮೂಲಕ ಶುಕ್ರವಾರ ಸಂಜೆ ವೈಭವದ ತೆರೆ ಎಳೆಯಲಾಯಿತು.
ತಾಲೂಕು ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ದಸರಾ ಉತ್ಸವ ಆಚರಣಾ ಸಮಿತಿಯಿಂದ ಹಮ್ಮಿಕೊಂಡ ದಸರಾ ಮೆರವಣಿಗೆ ವಿಶೇಷವಾಗಿತ್ತು.
ರಂಗನಾಥ ದೇವಸ್ಥಾನದಿಂದ ರಥದಲ್ಲಿ ದೇವಿಯ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಬಯಲು ಬಸವೇಶ್ವರ ದೇವರ ಆವರಣದಲ್ಲಿರುವ ಬನ್ನಿ ಮರದವರೆಗೆ ಸಾಗಿತು. ಪಟ್ಟಣದ ರಂಗನಾಥ ಸ್ವಾಮಿ, ದುರ್ಗಾಂಬಾ, ಮಾರಿಕಾಂಬಾ,ಪೇಟೆ ಬಸವೇಶ್ವರ, ನಾಗ ಚೌಡೇಶ್ವರಿ, ಯಲ್ಲಮ್ಮ, ವಿಠಲ ರುಖುಮಾಯಿ, ಮಾರಿಕಾಂಬ ದುರ್ಗಾಂಬಾ ದೇವಿ ಚಿಕ್ಕಶಕುನ ಮತ್ತು ಪಟ್ಟಣದ ಸರ್ವ ದೇವರ ಪಲ್ಲಕ್ಕಿ ಉತ್ಸವ ಜರುಗಿತು.
ನಂತರ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಹಸೀಲ್ದಾರ್ ಶಿವಾನಂದ ಪಿ.ರಾಣೆ ಅವರು ಬನ್ನಿ ಮರಕ್ಕೆ ಬಿಲ್ಲು ಹೊಡೆಯುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಷಣ್ಮುಖಾಚಾರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ನೆರೆದ ಜನರು ಒಬ್ಬರಿಗೊಬ್ಬರು ಬನ್ನಿ ಹಂಚಿಕೊಂಡು ಸಂಭ್ರಮ ಮೆರೆದರು.

ನಿಸ್ವಾರ್ಥ ಮನೋಭಾವನೆಯಿಂದ ಸಾರ್ಥಕತೆ: ಡಾ.ಮಹಾಂತ ಸ್ವಾಮೀಜಿ

ಮಾನುಷ್ಯನು ಸಮಾಜದಲ್ಲಿ ನಡೆಯುವ ಒಳ್ಳೆಯ ಕೆಲಸಕಾರ್ಯಗಳಿಗೆ ಅಡ್ಡಿಮಾಡದೆ ನಿಸ್ವಾರ್ಥತೆಯ ಭಾವನೆಯಿಂದ ಬದುಕಿದಾಗ ಜೀವನದಲ್ಲಿ ಸಾರ್ಥಕತೆ ಪಡೆಯಬದುದೆಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಚಂದ್ರಗುತ್ತಿಯಲ್ಲಿ ರೇಣುಕಾಂಬದೇವಿ ದಸರಾ ಆಚರಣಾ ಸಮಿತಿ ಗುರುವಾರ ಸಂಜೆ ಹಮ್ಮಿಕೊಂಡ ದಸರಾ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಾನವ ತನ್ನಲ್ಲಿರುವ ರಾಗ ದ್ವೇಷಗಳನ್ನು ಬಿಟ್ಟು ಶ್ರದ್ಧಾ ಭಕ್ತಿಯಿಂದ ದೈವಸ್ಮರಣೆಗೆ ಪಾತ್ರರಾದಗ ಮಾನವ ಜನ್ಮ ಸಾರ್ಥಕವಾಗುತ್ತದೆ. ಪ್ರಕೃತಿಯಲ್ಲಿಯ ಪ್ರಾಣಿ ಪಕ್ಷಿಗಳು ನಿಸ್ವಾರ್ಥತೆಯಿಂದ ಬದುಕು ಸಾಗಿಸುವುದನ್ನು ಮನುಷ್ಯ ಮಾದರಿಯಾಗಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಮಹಿಳೆಯರಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಹೆಣ್ಣು ದೇವತೆಯರ ಸ್ವರೂಪ ಜ್ಞಾನ ಶಕ್ತಿ, ಪರಾಶಕ್ತಿ, ಆದಿ ಶಕ್ತಿ, ಇಚ್ಛಾ ಶಕ್ತಿ, ಅಣುಶಕ್ತಿ ಎಂಬ ಶಕ್ತಿಯು ದೇವತೆಗಳಲ್ಲಿ ಕಂಡುಬರುತ್ತದೆ. ಜಗತ್ತಿನಲ್ಲಿ ಉತ್ತಮ ರೀತಿಯ ಬದುಕು ಸಾಗಿಸಲು ಧಾರ್ಮಿಕವಾದ ಚಿಂತನೆಗಳು ಜನರಲ್ಲಿ ಹೆಚ್ಚು ಹೆಚ್ಚು ಮೂಡಬೇಕಿದೆ. ಎಂದ ಅವರು ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರೀಯಾಶಕ್ತಿ ಪ್ರತೀಕವಾದ ಶ್ರೀಧರ್ ಹುಲ್ತಿಕೊಪ್ಪ ಅವರ ಧಾರ್ಮಿಕ, ಸಮಾಜಿಕ ಕಾರ್ಯ ಮಹತ್ವದ್ದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ಧರ್ಮದ ನೆರಳಿನಲ್ಲಿ ಬದುಕುವ ನಾವು ಧಾರ್ಮಿಕ ಚಟುವಟಿಕೆಗಳಿಗೆ ಕೈಜೋಡಿಸಿದಾಗ ಸಮಾಜದಲ್ಲಿ ಉತ್ತಮವಾದ ಮನ್ನಣೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿದರು.
ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ, ತಾ.ಪಂ ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಚಂದ್ರಗುತ್ತಿ ಗ್ರಾ.ಪಂ ಅಧ್ಯಕ್ಷ ರತ್ನಾಕರ, ವಸಂತಶೇಟ್, ರಾಮಣ್ಣ ಸ್ವಾದಿ, ಪ್ರಜ್ವಲ್ ಚಂದ್ರಗುತ್ತಿ, ಪ್ರಕಾಶ್, ಲೋಕೇಶ್, ಹನುಮಂತಪ್ಪ ಇತರರಿದ್ದರು.


Ad Widget

Related posts

ಬದುಕಲು ಮೊದಲು ವ್ಯವಸ್ಥೆಮಾಡಿ, ಆಮೇಲೆ ಚಿತಾಗಾರದ ಬಗ್ಗೆ ಯೋಚಿಸಿ

Malenadu Mirror Desk

ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಹೆಸರಿಡಲು ಆಗ್ರಹ

Malenadu Mirror Desk

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ರಾಜ್ಯ ಸರ್ಕಾರದ ವಿರೋಧ: ಕೇಂದ್ರಕ್ಕೆ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.