Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಶಾಸಕ ಹಾಲಪ್ಪ ಪುತ್ರಿ ವಿವಾಹ, ವಧುವರರನ್ನು ಹರಸಿದ ಮುಖ್ಯಮಂತ್ರಿ

ಸಾಗರ ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಅವರು ಪುತ್ರಿ ಡಾ.ಸುಶ್ಮಿತಾ ಅವರ ವಿವಾಹವು ನಿತಿನ್ ಅವರೊಂದಿಗೆ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕ ಸಚಿವರು, ಶಾಸಕರು ಗಣ್ಯರು ವಿವಾಹದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭಕೋರಿದರು.
ವರ ನಿತಿನ್ ಅವರು ಡಾ.ಪಾರ್ವತಮ್ಮ ರಾಜ್ ಕುಮಾರ್ ಸೋದರಿಯ ಪುತ್ರನಾಗಿರುವುದರಿಂದ ದೊಡ್ಮನೆ ಕುಟುಂಬದ ಹಲವರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಗರದಲ್ಲಿ ಅ.೨೩ ರಂದು ಸಾಗರದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ.

Ad Widget

Related posts

ಬಿಎಸ್‌ವೈ -ಈಶ್ವರಪ್ಪ ಬಣಜಗಳಕ್ಕೆ ಅಭ್ಯರ್ಥಿ ಘೋಷಣೆ ವಿಳಂಬ
ಮೂರನೇ ಪಟ್ಟಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಖೈರಾಗದ ಟಿಕೆಟ್

Malenadu Mirror Desk

ನೆಟ್ವರ್ಕ್ ಸಮಸ್ಯೆಗೆ ಶೀಘ್ರ ಪರಿಹಾರ : ಹಾಲಪ್ಪ

Malenadu Mirror Desk

ಒಕ್ಕಲಿಗರ ಯುವ ವೇದಿಕೆಯಿಂದ ಆಹಾರ ವಿತರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.