Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಹಸೆ ಚಿತ್ತಾರ ಕಲೆಯ ಕುರಿತ ಮೊದಲ ಸಮಗ್ರ ಸಂಶೋಧನಾ ಕಾರ್ಯ ಶ್ಲಾಘನೀಯ: ಕಾಗೋಡು ತಿಮ್ಮಪ್ಪ

ಹಸೆ ಚಿತ್ತಾರ ಕಲೆ ಶಿವಮೊಗ್ಗ, ಮಲೆನಾಡು ಭಾಗದ ಲಕ್ಷಾಂತರ ಹೆಣ್ಣುಮಕ್ಕಳ ಕಲಾ ಅಭಿವ್ಯಕ್ತಿಯಾಗಿದ್ದು ಸಂಪ್ರದಾಯ ಮೂಲದ ಈ ಚಿತ್ರಕಲೆಯು ಜನಪದರ ಅನನ್ಯ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುತ್ತದೆ. ಹಳ್ಳಿ ಜನರ ಆಚರಣೆಗಳ ಮೂಲ ಕಲೆಯೆಂದು ಈವರೆಗೆ ನಿರ್ಲಕ್ಷಿಸಲಾಗಿದ್ದ ಕಲೆಯ ಕುರಿತು ಮೊದಲ ಬಾರಿ ಸಮಗ್ರವಾಗಿ ಸಂಶೋಧನೆ ಮಾಡಿ ಪ್ರಕಟವಾಗಿರುವ ಈ ಕೃತಿಯ ಮೂಲಕ ದೊಡ್ಡ ಕಾರ್ಯವಾಗಿದೆ ಎಂದು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ರವಿರಾಜ್ ಸಾಗರ್ ಮಂಡಗಳಲೆ ಅವರ “ಕರ್ನಾಟಕ ದೇಶೀ ಚಿತ್ರಕಲೆ ಹಸೆ ಚಿತ್ತಾರ” ಸಂಶೋಧನಾ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಕೃತಿ ಪರಿಚಯ ಮಾಡಿದ ಚಿತ್ರಸಿರಿ ಚಂದ್ರಶೇಖರ್ ಅವರು ಹಸೆ ಚಿತ್ತಾರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪಸರಿಸಲು ಪ್ರಮುಖ ದಾಖಲೆಯಾಗಿದ್ದು ಇದು ಮುಂದಿನ ಸಂಶೋಧಕರಿಗೆ ದಾರಿದೀಪವಾಗಲಿದೆ ಎಂದರು. ಈ ಸಂಶೋಧನ ಕೃತಿ ಸುಮಾರು ಮೂರು ವರ್ಷಗಳ ಕ್ಷೇತ್ರಕಾರ್ಯದ ಪರಿಶ್ರಮದ ಫಲವಾಗಿದ್ದು , ಮಹಾರಾಷ್ಟ್ರದ ವರ್ಲಿ ಕಲೆ, ಬಿಹಾರದ ಮಧುಬನಿ, ಗೋವಾದ ಕಾವಿಕಲೆ, ಕರ್ನಾಟಕದ ವಿವಿಧ ಜಿಲ್ಲೆಗಳ ವಿವಿಧ ಆಚರಣೆಗಳ ಸಾಂಪ್ರದಾಯಿಕ ಚಿತ್ರಕಲೆಗಳ ಕ್ಷೇತ್ರಕಾರ್ಯ ಮಾಡಿ ಮಾಹಿತಿ ಸಂಗ್ರಹಿಸಿದ್ದು, ಹಲವು ದೇಸಿ ಚಿತ್ರಕಲೆಗಳ ಕುರಿತು ತೌಲನಿಕ ಅಧ್ಯಯನವನ್ನು ಸಹ ಈ ಕೃತಿ ಒಳಗೊಂಡಿದೆ ಎಂದು ಕೃತಿಕಾರರ ರವಿರಾಜ ಸಾಗರ್ ಮಂಡಗಳಲೆಯವರು ತಿಳಿಸಿದರು.

ಸಾಹಿತಿ ಸುಬ್ರಾಯ ಹೆಗಡೆ ಹಸೆ ಚಿತ್ತಾರ ಸಂಶೋಧನಾ ಕೃತಿಯ ಕೆಲವು ವಿಷಯಗಳ ಕುರಿತು ವಿವರಿಸಿದರು. ನಮ್ಮ ಬಹುತ್ವದ ಸಂಸ್ಕೃತಿ ಉಳಿಯಬೇಕು ಎಂದರು.
ಜಾನಪದ ಅಕಾಡೆಮಿ ಸದಸ್ಯೆ ಪುಷ್ಪಲತಾ ರವಿರಾಜ್ ಅವರ ಕ್ಷೇತ್ರ ಅಧ್ಯಯನ ಮೂಲಕ ಪ್ರಕಟಿಸಿರುವ ಹಸೆ ಚಿತ್ತಾರ ಸಂಶೋಧನ ಕೃತಿ ಮಹತ್ವದ ಕಾರ್ಯ ಎಂದರು.
ಪುಸ್ತಕವನ್ನು ಕೊಂಡು ಓದಿ ಸಂಶೋಧನಾಕಾರರನ್ನು ಪ್ರೋತ್ಸಾಹಿಸಬೇಕೆಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಅವರು ಕರೆ ನೀಡಿದರು. ಕರ್ನಾಟಕ ಹಸೆ ಚಿತ್ತಾರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕ ಚಿತ್ರಸಿರಿ ಸಿರಿವಂತೆಯಲ್ಲಿ ಈ ಸಂಶೋಧನ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೆಮನೆ ಅಧ್ಯಕ್ಷತೆ ವಹಿಸಿದ್ದರು. ಮಂಡಗಳಲೆ ಜಾನಪದ ಕಲಾವಿದರು ಹಾಗೂ ಮಕ್ಕಳು, ಜಾನಪದ ಗಾಯನ ಹಾಡಿದರು.
ಪ್ರಮೀಳಾ ಮನೋಜ್, ಪಂಚಮಿ ಸಾಗರ್, ವಿದ್ಯಾ ಸಿಂಗ್, ಭದ್ರ ಶೇಖರ, ಶೋಭಾ ಸತೀಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಭೂಮಿ ಹುಣ್ಣಿಮೆಯ ವಿಶೇಷ ದಿನದಂದು ಸ್ತ್ರೀ ಅಭಿವ್ಯಕ್ತಿಯ ವಿಶಿಷ್ಟ ಕಲೆಯಾದ ಹಸೆ ಚಿತ್ತಾರ ಸಂಶೋಧನ ಕೃತಿ ಬಿಡುಗಡೆ ಮಾಡಲು ಸಾಗರದ ಸುತ್ತಮುತ್ತಲಿನ ಹಲವಾರು ಮಹಿಳಾ ಕಲಾವಿದರು ಆಗಮಿಸಿದ್ದು ವಿಶೇಷವಾಗಿತ್ತು.

Ad Widget

Related posts

ಹಿಂದುಳಿದ ಜಾತಿಗಳ ಮೀಸಲಾತಿ, ಮತ್ತಿತರ ಬೇಡಿಕೆಗಳಿಗಾಗಿ ಹಕ್ಕೊತ್ತಾಯ, ಶಿವಮೊಗ್ಗದಲ್ಲಿ ಜ. 22 ರಂದು ಬೃಹತ್ ಸಮಾವೇಶ: ಡಾ.ರಾಮಪ್ಪ

Malenadu Mirror Desk

ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳ ಆಕ್ರೋಶ

Malenadu Mirror Desk

ಸಿಗಂದೂರು ದೇಗುಲದಿಂದ ಬಡವರಿಗೆ ಆಹಾರ ಕಿಟ್, ಆಂಬ್ಯುಲೆನ್ಸ್ ಸೇವೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.