Malenadu Mitra
Uncategorized

ಗಾಂಧಿ ತತ್ವಗಳು ಸಾರ್ವಕಾಲಿಕ ಶ್ರೇಷ್ಠ: ಕಾಗೋಡು ತಿಮ್ಮಪ್ಪ

ದೇಶದಲ್ಲಿನ ಹಿಂದುಳಿದ ವರ್ಗದ ಭೂಮಿ ಹಕ್ಕು ಕಲ್ಪಿಸುವಲ್ಲಿ ಕಾಂಗ್ರೆಸ್ ಪಕ್ಷದ ತ್ಯಾಗವಿದೆ. ಸಮಾಜದಲ್ಲಿನ ಲೋಪದೋಷಗಳ ನಿವಾರಣೆಗೆ ಗಾಂಧಿಯವರ ತತ್ವಗಳು ಸಾರ್ವಕಾಲಿಕ ಶ್ರೇಷ್ಠವಾದವು. ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಇರುವ ಅಂತಿಮ ಅಸ್ತ್ರ ಸತ್ಯಾಗ್ರಹ ಇದನ್ನು ಗಾಂಧಿ ನಮಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸಾಗರ ತಾಲ್ಲೂಕಿನ ತುಮರಿಯ ಗೋಪಾಲ ಗೌಡ ರಂಗಮಂದಿರದಲ್ಲಿ ಕರೂರು ಹೋಬಳಿಯ ಕುದರೂರು. ತುಮರಿ. ಎಸ್ ಎಸ್ ಭೋಗ್. ಚನ್ನಗೊಂಡ ಸೇರಿದಂತೆ ನಾಲ್ಕು ಗ್ರಾಮ ಪಂಚಾಯ್ತಿ ಘಟಕದ ವತಿಯಿಂದ ಆಯೋಜಿಸಿದ್ದ ೧೫೩ನೇ ಗಾಂಧಿ ಜಯಂತಿ ಹಾಗೂ ೭೫ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ಮಾತನಾಡಿ, ಗಾಂಧಿಯವರ ನೀಡಿರುವ ಮೌಲ್ಯಗಳು ಜಗತ್ತಿಗೆ ಮಾದರಿಯಾಗಿದೆ. ರೈತರಿಗೆ ಭೂಮಿಯ ಹಕ್ಕನ್ನು ನೀಡಿರುವುದು ಕಾಂಗ್ರೆಸ್ ದೇಶದ ದಲಿತರ. ದಮನಿತರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಆಪಾರ ಎಂದರು
ಇಂದು ರಾಷ್ಟ್ರ ಹಾಗೂ ರಾಜ್ಯದ ಬಹುತೇಕ ತೀರ್ಮಾನಗಳು ಸಂಘ ಪರಿವಾರದ ಕಚೇರಿಯಲ್ಲಿ ನೆಡೆಯುತ್ತಿದೆ ಇದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದರು
ಕಾಗೋಡು ಚಳುವಳಿ ರಾಜ್ಯದಲ್ಲಿನ ಭೂಮಿ ವಂಚಿತರಿಗೆ ನಿರಾಶ್ರಿತರಿಗೆ ನೆಲೆಯೂರಲು ಸಾಧ್ಯವಾಯಿತು. ಈ ಚಳವಳಿ ಇಂದಿನ ಯುವ ಜನತೆಗೆ ಮಾದರಿಯಾಗಿದೆ ಇಂದು ನಿಜವಾದ ಗಣತಂತ್ರ ಉಳಿಯಲು ಕಾಂಗ್ರೆಸ್ ಕಾರಣ ಇಂದಿನ ಗಣತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಗೆಲುವು ಪ್ರಮುಖ ಆದರೆ ರಾಜಕೀಯ ಪಕ್ಷಗಳು ನೈತಿಕತೆ ಮರೆಯಬಾರದು ಎಂದು ಹೇಳಿದರು.


ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಗಾಂಧೀಜಿಯವರು ದೇಶದ ಗುಡಿ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಗಮನ ಹರಿಸಿದ್ದರು ಆದರೆ ಇಂದಿನ ಜನಮಾನಸದಲ್ಲಿ ಯುವಕರು ನಗರ ಪ್ರದೇಶದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಇದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದರು. ಇಂದು ಸಂವಿಧಾನದ ಮೌಲ್ಯಗಳೇ ಇಲ್ಲದವರು ಆಡಳಿತ ನಡೆಸುತ್ತಿದ್ದು ಇದು ಸಂವಿಧಾನ ಆಶೋತ್ತರಗಳಿಗೆ ಕೊಡಲಿ ಪೆಟ್ಟು ನೀಡಲಿದೆ ಎಂದರು.
ಕೆಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಬೇಳೂರು ಮಾತನಾಡಿ ಗಾಂಧಿಜಿಯವರು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್ ಚೇತನ ಆದರೆ ದುರದೃಷ್ಟವಶಾತ್ ಇಂತಹ ಮಹಾನ್ ನಾಯಕನ ಚಿಂತನೆಗಳು ನಶಿಸುತ್ತಿದೆ ಇದಕ್ಕೆ ಮೂಲ ಕಾರಣ ಗಾಂಧಿಯವರ ಬಗ್ಗೆ ವ್ಯವಸ್ಥಿತವಾದ ಅಪಪ್ರಚಾರ ಮಾಡಲಾಗುತ್ತಿದೆ ಇದು ದೇಶದ ಗಣತಂತ್ರ ವ್ಯವಸ್ಥೆಗೆ ಮಾಡುವ ಅವಮಾನ ಎಂದರು.
ನಾಗರಾಜ್ ಸಸಿಗೊಳ್ಳಿ. ಸತ್ಯ ನಾರಾಯಣ ಜಿ.ಟಿ. ಓಂಕಾರ್ ಮುರಕ್ಕಿ. ವಿಜಯ್ ಆಡಗಳಲೆ. ರವಿ ಅಳೂರು. ಓಂಕಾರ್ ಜೈನ್. ದೇವರಾಜ್ ಕಪ್ಪದೂರು. ಗಣೇಶ್ ತುಮರಿ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಸರ್ಕಾರ ರಾತ್ರೋರಾತ್ರಿ ಕೃಷಿ ಕಾಯ್ದೆ ತಂದು ರೈತರ ಪಾಲಿಗೆ ಮರಣ ಶಾಸನ ಬರೆದಿದೆ ರೈತರ ಉಳಿವಿಗೆ ಭಿನ್ನಾಭಿಪ್ರಾಯ ಮರೆತು ಜನರು ಒಂದಾಗಬೇಕಿದೆ
-ಬಿ.ಆರ್.ಜಯಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

Ad Widget

Related posts

ರೈತರಿಗೆ ಒಂದಿಂಚು ಭೂಮಿ ನೀಡುವ ಕಾರ್‍ಯಕ್ರಮ ನೀಡದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು :ಕಾಗೋಡು ತಿಮ್ಮಪ್ಪ

Malenadu Mirror Desk

ಬಿಜೆಪಿ ಸಿದ್ದಾಂತ ಪಂಚಾಯ್ತಿ ಚುನಾವಣೆಯಲ್ಲಿ ಬರದು

Malenadu Mirror Desk

ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ ಗೆ ವಿಮಾನ :ನೂತನ ಮಾರ್ಗದಲ್ಲಿ ಸ್ಪೈಸ್‌ ಜೆಟ್‌ ಸಂಚಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.