ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹವನ್ನು ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಅವರು ಚಾಲನೆ ನೀಡಿ ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಬಹಳ ಅವಶ್ಯಕವಾಗಿದ್ದು, ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಅಧಿಕಾರಿಯಾದ ಉಲ್ಲಾಸ್ ಮತ್ತು ಸ್ವಯಂಸೇವಕರು, ಡಿವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್, ಎನ್ಎಸ್ಎಸ್ ಅಧಿಕಾರಿಗಳಾದ ತ್ರಿಶೂಲ್, ರಾಜುನಾಯ್ಕ್, ಮಲ್ಲಿಕಾರ್ಜುನ್, ಕೇತನ, ಆಶಾ, ಸ್ವಯಂಸೇವಕರು ಗಳಾದ ಪುನೀತ್, ಜಯಂತ್ ಬಾಬು ಇನ್ನಿತರರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ವಿಕಾಸ್ . ಆರ್ ಮತ್ತು ಲೋಹಿತ್ ಯಾದವ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
. ಈ ಸ್ವಚ್ಛತಾ ಅಭಿಯಾನ ಒಂದು ವಾರಗಳ ಕಾಲ ನಡೆಯಲಿದ್ದು ನಾಳೆ ಬೆಳಿಗ್ಗೆ 6.30 ರಿಂದ 8ಗಂಟೆವರೆಗೆ ಶಿವಪ್ಪ ನಾಯಕ ಸರ್ಕಲ್ ಹಾಗೂ ಗಾಂಧಿಬಜಾರ್ ನಲ್ಲಿ ಮಾಡಲಾಗುವುದು ಆಸಕ್ತ ಸ್ವಯಂಸೇವಕರುಗಳು ಮತ್ತು ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕೋರಿದೆ.