ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಂಜುನಾಥ್ ಮನವಿ
ಕನ್ನಡ ನಾಡು ನುಡಿಯ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಶಿವಮೊಗ್ಗದಲ್ಲಿ ಸಾಹಿತ್ಯ ಪರಿಷತ್ ಚಲನಶೀಲಗೊಳಿಸಿದ್ದ ತಮ್ಮನ್ನು ನವೆಂಬರ್ ೨೧ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಜಿಲ್ಲಾ ಅಧ್ಯಕ್ಷ ಸ್ಥಾನದ ಡಿ. ಮಂಜುನಾಥ್ ಮನವಿ ಮಾಡಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ಗೆ ಜಿಲ್ಲಾಧ್ಯಕ್ಷನಾಗಿ ಈಗಾಗಲೇ ಕೆಲಸ ಮಾಡಿದ ಅನುಭವ ಇದೆ. ನನ್ನ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಕನ್ನಡದ ಕೆಲಸ ಮಾಡಿದ್ದೇನೆ. ಕ.ಸಾ.ಪವನ್ನು ಕಟ್ಟಿ ಬೆಳೆಸಿದ್ದೇನೆ. ನಾನು ಮಾಡಿರುವ ಹಲವಾರು ಉಪಯುಕ್ತ ಕನ್ನಡದ ಕೆಲಸಗಳ ಆಧಾರದ ಮೇಲೆ ಪುನರಾಯ್ಕೆ ಬಯಸಿದ್ದೇನೆ ಎಂದರು.
ಎರಡುಬಾರಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಹಲವು ಸಮ್ಮೇಳನಗಳನ್ನು ನಡೆಸಿದ್ದೇನೆ. ಬಹಳ ಮುಖ್ಯವಾಗಿ ಸಾಹಿತ್ಯ ಗ್ರಾಮದ ಕನಸು ನನ್ನಿಂದಲೇ ಆರಂಭವಾಗಿದೆ. ಸರ್ಕಾರದಿಂದ ಸಿಕ್ಕಿರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಸಾಹಿತ್ಯ ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನ ನೀಡಿ, ಸಾಹಿತ್ಯದ ಮನಸ್ಸುಗಳನ್ನ ಒಟ್ಟುಗೂಡಿಸಿದ್ದೇನೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಭವನ ನಿರ್ಮಿಸಿದ್ದೇನೆ. ಹೋಬಳಿಗಳ ಮಟ್ಟದಲ್ಲಿ ಕಸಾಪ ಕಚೇರಿಗಳ ವಿಸ್ತರಿಸಿದ್ದೇನೆ. ಸಾಹಿತ್ಯದ ಕ್ರಿಯಾಶೀಲತೆಗೆ ಒತ್ತುಕೊಟ್ಟಿದ್ದೇನೆ. ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ಜಿಲ್ಲೆಯ ಸಾಧಕರ ಸ್ಮರಣೆ ಮಾಡಿದ್ದೇನೆ ಎಂದರು.
ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರದಿಂದ ಸಾಹಿತ್ಯ ಭವನಕ್ಕೆ ಬಿಡುಗಡೆಯಾದ ಹಣವನ್ನ ಇವರ ಸ್ವಂತ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಸರ್ಕಾರದ ಹಣವನ್ನು ಹಾಗೆ ವೈಯಕ್ತಿಕ ಖಾತೆಯಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ ಎಂಬ ಸಣ್ಣ ಸತ್ಯದ ಅರಿವು ಕೂಡ ಇವರಿಗಿಲ್ಲ. ಆರೋಪ ಮಾಡುವುದಷ್ಟೇ ಇವರ ಕೆಲಸವಾಗಿದೆ. ಅದಕ್ಕೆ ಸಮರ್ಥನೆ ಕೇಳಿದರೆ ಇವರ ಬಳಿ ಉತ್ತರವಿಲ್ಲ. ಸರ್ಕಾರದ ಹಣ ಪೋಲಾಗಿದ್ದರೆ ಯಾವುದೇ ಕಾರಣಕ್ಕೂ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದಿಲ್ಲ. ಆ ಅರಿವು ಕೂಡ ಆರೋಪ ಮಾಡಿದವರಿಗೆ ಇಲ್ಲ ಎಂದರು.
ಸಾಹಿತ್ಯದ ಕೆಲಸ ಎಂದರೆ ಅದು ಸಂಸ್ಕೃತಿಯ ಅರಿವಿನ ವಿಸ್ತಾರ ಎಂದೇ ಅರ್ಥ. ಭಾಷೆಯ ಸಮಸ್ಯೆ, ನೆಲ-ಜಲದ ಸಮಸ್ಯೆ ಇವೆಲ್ಲವನ್ನೂ ಚರ್ಚಿಸುತ್ತಾ ಕನ್ನಡದ ಮನಸ್ಸುಗಳನ್ನು ಸಂಘಟಿಸುವ ಹಂಬಲ ನನ್ನದು. ಸಾಹಿತ್ಯ ಗ್ರಾಮವನ್ನು ಮೂಲ ನೀಲನಕ್ಷೆಯಂತೆ ಪೂರ್ಣಗೊಳಿಸುವುದು, ತಾಲ್ಲೂಕು ಕೇಂದ್ರಗಳಲ್ಲಿ ಅರ್ಧಕ್ಕೆ ನಿಂತ ಕಸಾಪ ಕಟ್ಟಡಗಳನ್ನು ಪೂರ್ಣಗೊಳಿಸುವುದು. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು, ಗ್ರಂಥಾಲಯಗಳನ್ನು ಸ್ಥಾಪಿಸುವುದು, ಕಮ್ಮಟಗಳನ್ನು ನಡೆಸುವುದು, ಕಸಾಪವನ್ನು ಜಾತಿಯಿಂದ ಮುಕ್ತಗೊಳಿಸುವುದು, ಪುಸ್ತಕಗಳ ಪ್ರಕಟಣೆ, ಹೀಗೆ ಹಲವಾರು ಕೆಲಸಗಳನ್ನು ಸಾಕಾರಗೊಳಿಸಲು ಬದ್ಧನಾಗಿದ್ದೇನೆ ಆದ್ದರಿಂದ ಸಾಹಿತ್ಯ ಪರಿಷತ್ ಸದಸ್ಯರು ಈ ಬರಿ ತಮಗೆ ಮತ ನೀಡಿ ಗೆಲ್ಲಿಸಬೇಕೆಂದು
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ರತ್ನಯ್ಯ, ಮಧುಸೂದನ ಐತಾಳ, ಅಂಬಿಕ, ಲಕ್ಷ್ಮೀ ಮಹೇಶ್, ಹಿಳ್ಳೋಡಿ ಕೃಷ್ಣಮೂರ್ತಿ, ಗಣೇಶ್, ಶಿವಪ್ಪ, ಭಾರತೀ ರಾಮಕೃಷ್ಣ ಇದ್ದರು.
ಸಾಹಿತ್ಯ ಗ್ರಾಮದ ಕನಸು ನನ್ನಿಂದಲೇ ಆರಂಭವಾಗಿದೆ. ಸರ್ಕಾರದಿಂದ ಸಿಕ್ಕಿರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಸಾಹಿತ್ಯ ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನ ನೀಡಿ, ಸಾಹಿತ್ಯದ ಮನಸ್ಸುಗಳನ್ನ ಒಟ್ಟುಗೂಡಿಸಿದ್ದೇನೆ.
ಡಿ.ಮಂಜುನಾಥ್