Malenadu Mitra
ರಾಜ್ಯ ಶಿವಮೊಗ್ಗ

ರಾಮಾಯಣ ವಿಶ್ವಕಾವ್ಯ, ವಾಲ್ಮೀಕಿ ಜಾಗತಿಕ ಕವಿ: ಡಾ. ನಾಗಭೂಷಣ್

ಕುವೆಂಪು ವಿವಿಯಲ್ಲಿ ಜರುಗಿದ ವಾಲ್ಮೀಕಿ ಜಯಂತಿ

ಜಗತ್ತಿನ ಕಾವ್ಯ ಪರಂಪರೆಯಲ್ಲಿ ಮಂಚೂಣಿಯ ಸ್ಥಾನದಲ್ಲಿ ನಿಲ್ಲುವ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಸರ್ವಕಾಲಕ್ಕೂ ಸಲ್ಲುವ ಉದಾತ್ತ ಆದರ್ಶಗಳನ್ನು ಪ್ರತಿಪಾದಿಸಿದ ಜಾಗತಿಕ ಕವಿ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.‌ ನಾಗಭೂಷಣ್ ಬಗ್ಗನಡು ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಘಟಕದ ವತಿಯಿಂದ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರಾಮಾಯಣಗಳನ್ನು ಪುನರ್ ಸೃಷ್ಟಿಸಲಾಗಿದೆ. ಚೀನಾ, ಥೈಲ್ಯಾಂಡ್, ಮಲೇಷಿಯಾ, ಜಪಾನ್ ಮುಂತಾದ ಪೂರ್ವ ಏಷ್ಯಾದ ದೇಶಗಳಲ್ಲಿ ರಚಿತವಾಗಿರುವ ರಾಮಾಯಣಕ್ಕೆ ಮೂಲ ಸ್ಫೂರ್ತಿ ವಾಲ್ಮೀಕಿ ರಾಮಾಯಣವೇ. ಆದ್ದರಿಂದ ರಾಮಾಯಣವನ್ನು ವಿಶ್ವಕಾವ್ಯ ಎಂದು ಕರೆಯಬಹುದು ಎಂದು ಪ್ರತಿಪಾದಿಸಿದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ,ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಸ್ತ್ರೀ ಸಮಾನತೆ, ಸಹೋದರ ಭಾಂದವ್ಯ, ಅಹಿಂಸಾವಾದ, ನಿಸ್ವಾರ್ಥ ರಾಜಧರ್ಮ ಪಾಲನೆ, ಹೀಗೆ ಹತ್ತು ಹಲವು ಅನುಕರಣೀಯ ಮೌಲ್ಯಗಳಿವೆ. ಹೀಗಾಗಿಯೇ ರಾಮ ಮತ್ತು ರಾಮಾಯಣ ಭಾರತೀಯರ ಹೃದಯಕ್ಕೆ ಹತ್ತಿರವಾದ ಭಾವನಾತ್ಮಕ ವಿಚಾರ ಎಂದರು.

ಕುಲಸಚಿವೆ ಜಿ.‌ಅನುರಾಧ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಮೇರು ವ್ಯಕ್ತಿತ್ವವನ್ನು ಮತ್ತು ರಾಮಾಯಣದ ಮೂಲಕ‌‌ ಅವರು ಪ್ರತಿಪಾದಿಸಿದ ಆದರ್ಶಪ್ರಾಯ ಮೌಲ್ಯಗಳನ್ನು ಇಂದಿನ ಪೀಳಿಗೆಯವರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಪ್ರಾರಂಭಿಸಿರುವ ವಾಲ್ಮೀಕಿ ಜಯಂತಿಯನ್ನು ವಿಶ್ವವಿದ್ಯಾಲಯ‌ ಆಚರಿಸುವುದರ ಜೊತೆಗೆ ವರ್ಷಪೂರ್ತಿ ಎಸ್ ಸಿ ಎಸ್ ಟಿ ಘಟಕದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ‌ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.‌ಸಿ. ಎಂ. ತ್ಯಾಗರಾಜ, ಹಣಕಾಸು ‌ಅಧಿಕಾರಿ ಎಸ್. ರಾಮಕೃಷ್ಣ, ಘಟಕದ ಸಂಚಾಲಕ‌ ಡಾ. ಉದ್ದಗಟ್ಟಿ ವೆಂಕಟೇಶ್, ಅಧ್ಯಾಪಕರು, ಅಧ್ಯಾಪಕೇತರ ನೌಕರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ad Widget

Related posts

ಜೋಗದಲ್ಲಿ ಅಭಿವೃದ್ಧಿ ಕಾಮಗಾರಿ: ಪ್ರವಾಸಿಗರಿಗೆ ಮೂರು ತಿಂಗಳು ನಿರ್ಭಂದ

Malenadu Mirror Desk

ಭೂಮಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಚಾಣಕ್ಯ ಸೇನೆ ಪ್ರತಿಭಟನೆ

Malenadu Mirror Desk

ರೇಣುಕಾಸ್ವಾಮಿ ಮರ್ಡರ್ ಕೇಸ್ : ಎ-6 ಜಗದೀಶ್ ಜೈಲಿನಿಂದ ಬಿಡುಗಡೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.