Malenadu Mitra
ರಾಜ್ಯ ಶಿವಮೊಗ್ಗ

231 ಕಳವು ಪ್ರಕರಣ:ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ

ಶಿವಮೊಗ್ಗಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ 518 ಸ್ವತ್ತು ಕಳವು ಪ್ರಕರಣ ದಾಖಲಾಗಿದ್ದು,ಇದರಲ್ಲಿ 231 ಸ್ವತ್ತು ಕಳವು ಪ್ರಕರಣ ಭೇದಿಸಿರುವ ಪೋಲಿಸರು. ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಡಿಎಆರ್ ಪೋಲಿಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪತ್ತೆಯಾದ ಸಾಮಾಗ್ರಿಗಳನ್ನು ವಾರಸುದಾರರಿಗೆ ಬಿಟ್ಟುಕೊಡುವ ಕವಾಯತು(ಪಾಪರ್ಟಿ ರಿಟರ್ನ್ ಪರೇಡ್) ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ ಲಕ್ಷ್ಮಿ ಪ್ರಸಾದ್ ಅವರು, ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 518 ಸ್ವತ್ತು ಕಳವು ಪ್ರಕರಣಗಳಲ್ಲಿ 231 ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ,ಆರೋಪಿಗಳಿಂದ ಜಪ್ತಿ ಮಾಡಿಕೊಂಡಿರುವ ಸಾಮಾಗ್ರಿಗಳನ್ನು ವಾರಸುದಾರರಿಗೆ ನೀಡಲಾಗಿದೆ ಎಂದು ತಿಳಿಸಿದರು.

3.03 ಕೋಟಿ ಮೌಲ್ಯದ ಸಾಮಾಗ್ರಿ ಜಪ್ತಿ

ಒಟ್ಟು 518 ಸ್ವತ್ತು ಕಳವು ಪ್ರಕರಣ ದಾಖಲಾಗಿದ್ದು,ಅದರಲ್ಲಿ 6 ದರೋಡೆ ಪ್ರಕರಣ, 54 ಸುಲಿಗೆ ಪ್ರಕರಣ, 151 ಕನ್ನ ಕಳವು ಪ್ರಕರಣ ಸೇರಿವೆ.ಸದರಿ ಪ್ರಕರಣಗಳಲ್ಲಿ ಅಂದಾಜು ರೂ 6,23,91,247 ಮೌಲ್ಯದ ಸ್ವತ್ತು ಕಳವು ಮಾಡಲಾಗಿದೆ.ಜಿಲ್ಲೆಯ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು

ಏನೇನು ವಶಕ್ಕೆ

ಇದರಲ್ಲಿ ಒಟ್ಟು 231 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಅಂದಾಜು ಮೌಲ್ಯ 1,22,10,959 ರೂ. ಮೌಲ್ಯದ 2 ಕೆಜಿ 879 ಗ್ರಾಂ ಬಂಗಾರದ ಆಭರಣಗಳು, ಅಂದಾಜು ರೂ 9,52,54914 ಮೌಲ್ಯದ 394 ಗ್ರಾಂ ಬೆಳ್ಳಿ ಆಭರಣಗಳು, ರೂ, 55,88,949 ಮೌಲ್ಯದ 73 ವಾಹನಗಳು, 27 ಮೊಬೈಲ್ ಫೆÇೀನ್ ಗಳು, 6 ಜಾನುವಾರುಗಳು, 39 ಕ್ವಿಂಟಾಲ್ ಅಡಿಕೆ, ಎಲೆಕ್ಟ್ರಾನಿಕ್ ವಸ್ತು ಹಾಗೂ ಇತರ ವಸ್ತುಗಳು ಎಲ್ಲಾ ಸೇರಿ 3,03,59,000 ರೂ.ಗಳ ಮಾಲನ್ನು ಪತ್ತೆ ಮಾಡಲಾಗಿದೆ ಎಂದರು.
ಇತ್ತೀಚೆಗೆ ಅಡಿಕೆ ಕಳವು ಪ್ರಕರಣ ಜಾಸ್ತಿ ವರದಿಯಾಗುತ್ತಿವೆ. ಈವರೆಗೆ ಒಟ್ಟು 928 ಪ್ರಕರಣಗಳು ದಾಖಲಾಗಿದ್ದು, ಮೊಬೈಲ್ ರಾಬರಿ ಪ್ರಕರಣಗಳನ್ನು ಕಂಡು ಹಿಡಿದಿದ್ದೇವೆ. ಕಳ್ಳತನ ಪುನಾರವರ್ತನೆ ಮಾಡಿದ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಹೊರ ರಾಜ್ಯದವರು ಇದ್ದಾರೆ. ಚಿಕ್ಕಮರಡಿ, ಭದ್ರಾವತಿ, ಶಿವಮೊಗ್ಗದ ಒಟ್ಟು 8 ಡಕಾಯಿತಿ ಪ್ರಕರಣಗಳನ್ನು ಭೇದಿಸಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ 177 ದ್ವಿಚಕ್ರ ಮತ್ತು 4 ಚಕ್ರದ ವಾಹನ ಕಳ್ಳತನವಾಗಿದ್ದು, 78 ರಿಕವರಿಯಾಗಿದೆ.

ಪೌರ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಹಣಗೆರೆ ಕಟ್ಟೆಯ ಪ್ರಕರಣದಲ್ಲೂ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದರು.
ಕಳವು ಪ್ರಕರಣ ಮತ್ತು ಇನ್ನಿತರ ಪ್ರಕರಣಗಳಲ್ಲಿ ಶಕ್ತಿ ಮೀರಿ ಯಶಸ್ವಿಯಾದ ಪೆÇಲೀಸ್ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಡಾ. ಶೇಖರ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಈಶ್ವರ ನಾಯ್ಕ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ಜೆಪಿ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ, ಈಡಿಗ ಸ್ವಾಮೀಜಿಗೆ ಗುರುವಂದನೆ ಜಿಲ್ಲಾ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಮಾಹಿತಿ

Malenadu Mirror Desk

ಮಲೆನಾಡಿನ ಹಸೆ ಚಿತ್ತಾರವನ್ನು ಯುವ ಪೀಳಿಗೆ ಮುಂದುವರಿಸಲಿ: ಮಾಜಿ ಸಚಿವ ಕಾಗೋಡು

Malenadu Mirror Desk

ಪತಿಯಿಂದ ಪತ್ನಿಯ ಕೊಲೆ: ಆರೋಪಿ ವಶಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.