ಶಿವಮೊಗ್ಗನಗರದ ಮಾಜಿ ಶಾಸಕರು, ಕೆಪಿಸಿಸಿ ವಕ್ತಾರರು ಆದ ಕೆ ಬಿ ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ವಿನೋಬನಗರದ ಕಂಚಿ ಕಾಮಾಕ್ಷಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಕೆ ಬಿ ಪ್ರಸನ್ನ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ, ಮಾಸ್ಕ, ಪುಸ್ತಕ, ಪೆನ್ಸಿಲ್ ಬಾಕ್ಸ್, ಕ್ರಯೊನ್ಸ್ ಹಾಗು ಮನೆ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬ್ಲಾಂಕೆಟ್ ವಿತರಿಸಲಾಯಿತು
ಶಿವಮೊಗ್ಗ ನಗರಪಾಲಿಕೆ ಮಾಜಿ ಸದಸ್ಯರಾದ ದೀಪಕ್ ಸಿಂಗ್ , ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರದಾನ ಕಾರ್ಯದರ್ಶಿಗಳಾದ ದಯಾನಂದ್, ಶಂಕರ್, ಹರೀಶ್, ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ಷಣ್ಮುಖ, ಯು ಕೆ ಪ್ರಕಾಶ್ ರವರು ವಾರ್ಡ್ ಪ್ರಮುಖರಾದ ಗೋಪಾಲ್, ಸುರೇಶ, ಗೋಪಿ, ಆಶಾ ಹಾಗು ಮುಂತಾದವರು ಉಪಸ್ಥಿತರಿದ್ದರು.