ಜಿದ್ದಾಜಿದ್ದಿನ ಚುನಾವಣೆಯಲ್ಲಿ ತಲೆಕೆಳಗಾದ ಶಂಕರಪ್ಪ ಪರಿವಾರದ ಲೆಕ್ಕಾಚಾರ
ಜಿದ್ದಾಜಿದ್ದಿನಿಂದ ಕೂಡಿದ್ದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡಿ.ಮಂಜುನಾಥ್ ನಾಲ್ಕನೇ ಬಾರಿ ಪರಿಷತ್‍ನ ಸಾರಥಿಯಾಗಿದ್ದಾರೆ.ನಿಕಟಪೂರ್ವ·ಅಧ್ಯಕ್ಷ·ಡಿ.ಬಿ.ಶಂಕರಪ್ಪ·ಅವರ·ಪರವಾಗಿ·ಸಂಘಪರಿವಾರದ·ಕೆಲ ಮುಖಂಡರು ಸಭೆ ನಡೆಸಿ ಬೆಂಬಲ ಕೋರಿದ್ದರು. ಬಿಜೆಪಿಯ ಕೆಲ ಮುಖಂಡರೂ ಕೂಡಾ ಪರೋಕ್ಷವಾಗಿ ಶಂಕರಪ್ಪ ಪರ ಚುನಾವಣೆ ಪ್ರಚಾರ ಮಾಡಿದ್ದರು ಎನ್ನಲಾಗಿತ್ತು. ಸಾಹಿತ್ಯ ಸಂಘಟನೆಯಲ್ಲಿ ರಾಜಕೀಯ ಮತ್ತು ಜಾತಿ ಸಂಘಟನೆಗಳ ಹಸ್ತಕ್ಷೇಪವಿದೆ. ಇದು ಕನ್ನಡ ನಾಡು ,ನುಡಿ ಪ್ರತಿನಿಧಿಸುವ ಸಂಘಟನೆಗೆ ಶೋಬೆ ತರುವ ಸಂಗತಿಯಲ್ಲ ಎಂಬ ವಿರೋಧ ವ್ಯಕ್ತವಾಗಿತ್ತು.
ಈ ಎಲ್ಲ ಆರೋಪ ಪ್ರತ್ಯಾರೋಪಗಳಿಗೆ ಸಾಹಿತ್ಯ ಪರಿಷತ್‍ನ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅಂತಿಮವಾಗಿ ಡಿ.ಮಂಜುನಾಥ್ ಅವರಿಗೆ ಒಟ್ಟು 2756 ಮತಗಳು ಲಭಿಸಿದರೆ, ಅವರ ಪ್ರತಿಸ್ಪರ್ಧಿ ಡಿ.ಬಿ.ಶಂಕರಪ್ಪ ಅವರಿಗೆ 2314 ಮತಗಳು ಬಂದಿದ್ದು, ಮಂಜುನಾಥ್ ಅವರು 442 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಅಧ್ಯಕ್ಷರುಗಳ ಬಿರುಸಿನ ಪೈಪೋಟಿ ನಡುವೆ ಹೊಸಮುಖಗಳಾದ ಶಿ.ಜುಪಾಶ ಹಾಗೂ ಶ್ರೀನಿವಾಸ್ ಅವರನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಪಾಶ ಅವರು 249 ಮತಗಳನ್ನು ಪಡೆದರೆ, ಶ್ರೀನಿವಾಸ್ ಅವರಿಗೆ ಕೇವಲ 49 ಮತಗಳು ಲಭಿಸಿವೆ.
ಮಂಜುನಾಥ್ ಅವರಿಗೆ ಶಿವಮೊಗ್ಗ,ಸಾಗರ, ಸೊರಬ,ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ಅಧಿಕ ಮತಗಳು ಬಂದಿದ್ದರೆ, ಶಂಕರಪ್ಪ ಅವರಿಗೆ ಶಿಕಾರಿಪುರ ಮತ್ತು ಭದ್ರಾವತಿಯಲ್ಲಿ ಲೀಡ್ ಬಂದಿದೆ.
ತೀರ್ಥಹಳ್ಳಿ: ಡಿ.ಮಂಜುನಾಥ್-323, ಶಂಕರಪ್ಪ- 66
ಶಿವಮೊಗ್ಗ: ಮಂಜುನಾಥ್ 286, ಶಂಕರಪ್ಪ 256
ಸೊರಬ: ಡಿ. ಮಂಜುನಾಥ್ 179, ಶಂಕರಪ್ಪ 129
ಸಾಗರ: ಡಿ ಮಂಜುನಾಥ್ 391, ಶಂಕರಪ್ಪ 194
ಭದ್ರಾವತಿ: ಡಿ ಮಂಜುನಾಥ್ 252, ಶಂಕರಪ್ಪ 375
ಹೊಸನಗರ: ಮಂಜುನಾಥ್ 464, ಶಂಕರಪ್ಪ 161
ಶಿಕಾರಿಪುರ: ಮಂಜುನಾಥ್ 254, ಶಂಕರಪ್ಪ 946.