ದಾನ-ಧರ್ಮ ಎಂದರೆ ಜನ ತಪ್ಪಿಸಿಕೊಂಡು ಓಡಾಡುವ ಈ ಕಾಲದಲ್ಲಿ ಬಿಕ್ಷೆ ಬೇಡುತ್ತಿದ್ದ ಅಜ್ಜಿಯೊಬ್ಬರು ನೀಡಿರುವ ದಾನದ ವಿಚಾರ ಕೇಳಿದರೆ ಶಾಕ್ ಆಗ್ತೀರಿ!.
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಸಾಯಿಬಾಬಾ ದೇಗುಲದ ಬಳಿ ಬಿಕ್ಷೆ ಬೇಡುವ ಹಣ್ಣು ಹಣ್ಣು ಮುದುಕಿ ಕೆಂಪಜ್ಜಿ ಕೂಡಿಟ್ಟಿದ್ದನ್ನು ಕೊಟ್ಟು ಮಾದರಿಯಾಗಿದ್ದಾರೆ.
ಮಂಗಳವಾರ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದ ಅಜ್ಜಿ ಆಡಳಿತ ಮಂಡಳಿಯ ಅಧ್ಯಕ್ಷರನ್ನ ಹುಡುಕಾಡಿದ್ದಾರೆ.
ಹಣ ಕೇಳಲು ಬಂದಿದ್ದಾಳೆಂದು ಭಾವಿಸಿ ಎಲ್ಲರೂ ಭಿಕ್ಷುಕಿಯನ್ನ ತಾತ್ಸಾರದಿಂದ ನೋಡಿ ಮುಂದೆ ಹೋಗು ಅನ್ನುತ್ತಿದ್ದವರೇ. ಕೊನೆಗೆ ಭಿಕ್ಷುಕಿ ಕೆಂಪಜ್ಜಿ ಸೀದಾ ದೇವಸ್ಥಾನದ ಒಳಕ್ಕೆ ಹೋಗಿ ಸ್ವಾಮೀಜಿಯ ಕೈಗೆ ೫೦೦ರ ೪೦ ನೋಟು ಕೊಟ್ಟರು. ಈ ದೃಶ್ಯ ಕಂಡ ಅಲ್ಲಿದ್ದ ಎಲ್ಲರೂ ದಂಗಾಗಿ ಹೋದರು. ಈ ಹಣದಲ್ಲಿ ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂಬ ಬೇಡಿಕೆಯನ್ನೂ ಅಜ್ಜಿ ಗುರುಗಳ ಮುಂದಿಟ್ಟರು. ನೆರೆದಜನ ಸಾವಿರ ಜನ ಲಕ್ಷ ಕೊಟ್ರು ಈ ೨೦ ಸಾವಿರ ಮೌಲ್ಯದ್ದು ಎಂದು ಬಣ್ಣಿಸಿದರು. ಕೊನೆಗೆ ಭಿಕ್ಷುಕಿ ಅಜ್ಜಿಯ ಜತೆಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು.
ಹಣ ಎಲ್ರಿಗೂ ಸುಮ್ನೆ ಬರಲ್ಲ, ಆದರೆ ಬಂದ ಹಣವನ್ನು ಹೀಗೆ ವಿನಿಯೋಗಿಸುವ ಮೂಲಕ ಕೆಂಪಜ್ಜಿ ಉಳಿದವರಿಗೆ ಮಾದರಿಯಾಗಿದ್ದಾರೆ.