ತೀರ್ಥಹಳ್ಳಿ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಗೋಕಳ್ಳರ ಅಕ್ರಮ ಧಂದೆ,ಗೋ ಸಾಗಾಣಿಕೆ ಹಾಗೂ ಮಂಗಳವಾರದಂದು ಬೆಜ್ಜವಳ್ಳಿ ಸಮೀಪ ಗೋಕಳ್ಳರನ್ನು ಬೆನ್ನಟ್ಟಿದ ಇಬ್ಬರು ಭಜರಂಗದಳ ಕಾರ್ಯಕರ್ತರನ್ನು ಹತ್ಯೆಗೈಯಲು ಯತ್ನಿಸಿದ ವಿರುದ್ಧ ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ,ಮುಖ್ಯ ರಸ್ತೆಯಲ್ಲಿ ಧರಣಿ ನಡೆಸಿದರು.
ತೀರ್ಥಹಳ್ಳಿ ಪಟ್ಟಣದ ಪ್ರೇರಣಾ ಕಛೇರಿಯಿಂದ ಮೆರವಣಿಗೆ ಹೊರಟ ಹಿಂದೂಪರ ಸಂಘಟನೆಗಳಾದ ಭಜರಂಗದಳ,ಶ್ರೀರಾಮಸೇನೆ,ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ತಾಲೂಕ್ ಕಛೇರಿ ಮುಂಭಾಗದ ಮುಖ್ಯರಸ್ತೆಯಲ್ಲಿ ಒಂದು ಘಂಟೆಗಳ ಕಾಲ ರಸ್ತೆ ತಡೆ ನೆಡೆಸಿದರು.
ಈ ಪ್ರತಿಭಟನೆಯಲ್ಲಿ ಮಾತನಾಡಿದ ಆರ್.ಎಸ್.ಎಸ್ ಪ್ರಮುಖ ಭಾರತೀಪುರ ದಿನೇಶ್ ಮಾತನಾಡಿ ನಾವು ಪೂಜಿಸುವ ಗೋಮಾತೆಯನ್ನು ಕೊಂದು ವ್ಯಾಪಾರ ಮಾಡುವ ದಂಧೆಯ ಬಗ್ಗೆ ಕಿಡಿಕಾರಿದರು.ನಿರಂತರವಾಗಿ ಗೋಹತ್ಯೆ,ಸಾಗಾಣಿಕೆ ನೆಡೆಯುತ್ತಿದ್ದರೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ,ಹಿಂದೂ ಪರ ಸಂಘಟನೆಯ ನಮ್ಮ ತಾಳ್ಮೆಯನ್ನು ಪರಿಕ್ಷಿಸಬೇಡಿ,ಇಂತಹ ಹೀನಾಯ ಕೆಲಸ ಮಾಡುತ್ತಿರುವವರ ವಿರುಧ್ದ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲು ವಿಫಲವಾಗಿರುವುದು ನಾಚಿಗೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಯ ಮುಖಂಡರರಾದ ಲೋಹಿತಾಶ್ವ,ವಾಸುದೇವ್,ಜಿಲ್ಲಾ ಭಜರಂಗದಳದ ರಾಜೇಶ್,ತಾ.ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್,ಬಿಜೆಪಿ ಮುಖಂಡರಾದ ಸಂದೇಶ್ ಜವಳಿ,ಸಾಲೇಕೊಪ್ಪ ರಾಮಚಂದ್ರ ಮುಂತಾದವರು ಮಾತನಾಡಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕ ಆಗಮಿಸಿದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಲಕ್ಷೀಪ್ರಸಾದ್ ಮಾತನಾಡಿ, ಈಗಾಗಲೇ ನಡೆದ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದೇವೆ.ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಗೋಕಳ್ಳರ ವಿರುಧ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಒಂದು ಗಂಟೆಕಾಲ ಮುಖ್ಯ ರಸ್ತೆ ತಡೆ ನೆಡೆಸಿದ ಪ್ರತಿಭಟನಾಕಾರರ ವರ್ತನೆಯಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.