Malenadu Mitra
ರಾಜ್ಯ ಶಿವಮೊಗ್ಗ

ಬಿಜೆಪಿ ಸರ್ಕಾರದಲ್ಲಿ ಗ್ರಾಮಪಂಚಾಯಿತಿಗಳ ಅಧಿಕಾರ ಮೊಟಕು: ಮಧುಬಂಗಾರಪ್ಪ

ಗ್ರಾಮ ಪಂಚಾಯಿತಿ ಸದಸ್ಯರನ್ನು ಬಿಜೆಪಿಯವರು ಬೀದಿಗೆ ತಂದು ನಿಲ್ಲಿಸಿದ್ದಾರೆ. ಹಾಗಾಗಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಗ್ರಾಮಪಂಚಾಯಿತಿಗಳ ಅಧಿಕಾರವನ್ನೇ ಮೊಟಕುಗೊಳಿಸಲಾಗಿದೆ. ಯಾವುದೇ ಸ್ವನಿರ್ಧಾರದ ಯೋಜನೆಗಳನ್ನು ಅವರು ಮಾಡುವಂತಿಲ್ಲ. ಅನುದಾನವನ್ನು ಕೂಡ ಹೆಚ್ಚು ಮಾಡಿಲ್ಲ. ಗ್ರಾಮಪಂಚಾಯಿತಿ ಸದಸ್ಯರ ವೇತನ ಕೂಡ ಹೆಚ್ಚು ಮಾಡಿಲ್ಲ. ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿಯೇ ಮರಿಚಿಕೆಯಾಗಿದೆ. ಸರ್ಕಾರದ ಯೋಜನೆಗಳು ಕೂಡ ತಲುಪದೆ ಹೋಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಹದಗೆಟ್ಟಿದೆ. ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಇದರಿಂದ ಬೇಸರಗೊಂಡಿದ್ದಾರೆ. ಒಟ್ಟಾರೆ ಜನರ ಭಾವನೆಗಳಿಗೆ ಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಗ್ರಾ.ಪಂ.ಸದಸ್ಯರಿಗೆ ಸಹಜವಾದ ಸಿಟ್ಟಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿಯ ಅಭ್ಯರ್ಥಿಗಳು ಈ ಭಾರಿ ಪರಿಷತ್ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಸೋಲು ಕಾಣಲಿದ್ದಾರೆ ಎಂದರು.

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಸರಳ ಸಜ್ಜನರಾಗಿದ್ದಾರೆ. ತಮ್ಮ ಕಳೆದ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿ ಅವರು ಗೆಲ್ಲುವುದು ಖಚಿತ ಅತ್ಯಂತ ಹೆಚ್ಚು ಅಂತರದಲ್ಲಿ ಅವರನ್ನು ಗಲ್ಲಿಸಬೇಕಾಗಿದೆ. ಈಗಾಗಲೇ ಅವರ ಪರ ದಾವಣಗೆರೆಯ ಮೂರು ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಪ್ರಚಾರ ಕಾರ್ಯ ಆರಂಭವಾಗಿದೆ. ಬಹುತೇಕ ಎಲ್ಲರು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಮುಖ್ಯವಾಗಿ ಜೆಡಿಎಸ್ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ರಾಜ್ಯಮಟ್ಟದಲ್ಲಿ ಪಕ್ಷದ ಮುಖಂಡರುಗಳ ತೀರ್ಮಾನಗಳು ಏನೇ ಇದ್ದರೂ ಅದು ಸ್ಥಳೀಯವಾಗಿ ನಡೆಯುವುದಿಲ್ಲ. ಇಲ್ಲಿ ಸ್ಥಳೀಯ ಮತದಾರರದ್ದೇ ಅಂತಿಮ ನಿರ್ಧಾರವಾಗುತ್ತದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಗ್ರಾ.ಪಂ.ಮಟ್ಟದಲ್ಲಿ ಒಂದು ರೀತಿಯ ಮಾನಸಿಕ ಹೊಂದಾಣಿಕೆ ಇದೆ. ಜೆಡಿಎಸ್ ಬೆಂಬಲಿತ ಸದಸ್ಯರು ಬಿಜೆಪಿಯನ್ನು ಬೆಂಬಲಿಸುವುದು ಕಷ್ಟ ಸಾಧ್ಯ. ತಾವು ಸಹ ಈಗಾಗಲೇ ಜೆಡಿಎಸ್ನ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿದ್ದೇನೆ.  ಕಾಂಗ್ರೆಸ್‌ಗೆ ಅವರಿಂದ ಬೆಂಬಲ ನಿರೀಕ್ಷೆ ಮಾಡಿದೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. ಕಾಂಗ್ರೆಸ್‌ನ ಸಾಧನೆಗಳನ್ನು ಜನರಿಗೆ ತಲುಪಿಸುತ್ತೇವೆ. ಆ ಮೂಲಕವೇ ಮತ ಕೇಳುತ್ತೇವೆ. ಈ ಬಾರಿ ಆರ್.ಪ್ರಸನ್ನಕುಮಾರ್ ಅವರ ಗೆಲುವು ಖಚಿತ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
ಪ್ರಮುಖರಾದ ಕೆ.ಬಿ.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ವಿಜಯ್‌ಕುಮಾರ್, ಎಂ.ಬಿ.ರಾಜಪ್ಪ ಎಸ್.ಪಿ.ದಿನೇಶ್, ಜಿ.ಡಿ.ಮಂಜುನಾಥ್, ನಾಗರಾಜ್, ಶಿವಾನಂದ್, ದೇವಿಕುಮಾರ್ ಸೇರಿದಂತೆ ಹಲವರಿದ್ದರು.

ಜೆಡಿಎಸ್ ಬೆಂಬಲಿತ ಗ್ರಾ.ಪಂ.ಸದಸ್ಯರು ಕೂಡ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ರಾಜ್ಯಮಟ್ಟದಲ್ಲಿ ಪಕ್ಷದ ಮುಖಂಡರುಗಳ ತೀರ್ಮಾನಗಳು ಏನೇ ಇದ್ದರೂ ಅದು ಸ್ಥಳೀಯವಾಗಿ ನಡೆಯುವುದಿಲ್ಲ. ಇಲ್ಲಿ ಸ್ಥಳೀಯ ಮತದಾರರದ್ದೇ ಅಂತಿಮ ನಿರ್ಧಾರವಾಗುತ್ತದೆ

– ಮಧುಬಂಗಾರಪ್ಪ ,ಮಾಜಿ ಶಾಸಕ

Ad Widget

Related posts

ಶಿವಮೊಗ್ಗದಲ್ಲಿ ಸಾವಿರ ದಾಟಿದ ಸೋಂಕು, ಸಾಗರ,ಸೊರಬ, ಭದ್ರಾವತಿಯಲ್ಲಿ ಏರಿಕೆ

Malenadu Mirror Desk

ಮಾರ್ಚ್ 6ರಿಂದ ಮಹಿಳಾ ರಂಗೋತ್ಸವ

Malenadu Mirror Desk

ನಂದಿತ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.