Malenadu Mitra
ರಾಜ್ಯ ಶಿವಮೊಗ್ಗ

ಒಕ್ಕಲಿಗರ ಸಂಘದ ಚುನಾವಣೆ:ಧರ್ಮೇಶ್‌ಗೆ ಭರ್ಜರಿ ಜಯ

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ತೀರ್ಥಹಳ್ಳಿಯ ಧರ್ಮೇಶ್ ಸಿರಿಬೈಲು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.ಪ್ರತಿಸ್ಪರ್ಧಿ  ಭದ್ರಾವತಿಯ ಕುಮಾರ್ ಅವರಿಗಿಂತಲೂ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಧರ್ಮೇಶ್ ಅವರು 5808 ಮತಗಳನ್ನು ಪಡೆದಿದ್ದಾರೆ.ಕುಮಾರ್ ಅವರು3486 ಮತಗಳನ್ನು ಗಳಿಸಿದ್ದಾರೆ.ಬಹುಮತ ಪಡೆದ ಧರ್ಮೇಶ್ ಅವರು ಜಯಶಾಲಿ ಎಂದು ಘೋಷಿಸಲಾಗಿದೆ.
ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಶ್ ಸಿರಿಬೈಲು ಅವರು ಗೆಲುವು ದಾಖಲಿಸುತ್ತಿದ್ದಂತೆ ಅವರ ಬೆಂಬಲಿಗರು,ಹಿತೈಷಿಗಳು ಸಂಭ್ರಮಾಚರಣೆ  ಮಾಡಿದರು.ಮತ ಎಣಿಕೆ ಕೇಂದ್ರದ  ಮುಂದೆ ಕುವೆಂಪು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿದರು.ಅಲ್ಲದೇ,ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಧರ್ಮೇಶ್ ಅವರಿಗೆ ಹೂವಿನ ಹಾರ ಹಾಕಿ ಶುಭಾಷಯ ಕೋರಿದರು.
ಎಷ್ಟು ಮತಗಳು ತಿರಸ್ಕೃತ
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ11348ಮತಗಳು ಚಲಾವಣೆಯಾಗಿದ್ದವು.ಈ ಪೈಕಿ 66 ಮತಗಳು ತಿರಸ್ಕೃತವಾಗಿವೆ.ವಿವಿಧ ಕಾರಣಕ್ಕಾಗಿ ಮತಗಳು ತಿರಸ್ಕೃತವಾಗಿದ್ದು,ಎಣಿಕೆ ವೇಳೆ ಅವುಗಳನ್ನು ಪ್ರತ್ಯೇಕಿಸಲಾಗಿತ್ತು.
ಮತ ಎಣಿಕೆ ಕೇಂದ್ರದ ಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Ad Widget

Related posts

ಬಿಜೆಪಿ ಅಭ್ಯರ್ಥಿಗಳ ಘೋಷಣೆ, ದಕ್ಷಿಣ ಕನ್ನಡಕ್ಕೆ ಪೂಜಾರಿ, ಶಿವಮೊಗ್ಗಕ್ಕೆ ಅರುಣ್, ಚಿಕ್ಕಮಗಳೂರಿಗೆ ಪ್ರಾಣೇಶ್

Malenadu Mirror Desk

ಧರ್ಮಕೇಂದ್ರಿತ ಸಂಗತಿಗಳಿಂದ ದಾರ್ಶನಿಕರ ಚಿಂತನೆ ಗೌಣ

Malenadu Mirror Desk

ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ , ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿದ ಜನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.