Malenadu Mitra
ರಾಜ್ಯ ಶಿವಮೊಗ್ಗ

ಸುವರ್ಣ ಮಹೋತ್ಸವ: ಪದವೀಧರ ಸಹಕಾರ ಸಂಘದಿಂದ ಕುವೆಂಪು ವಿವಿಯಲ್ಲಿ ಮೂರು ಚಿನ್ನದ ಪದಕ ಸ್ಥಾಪನೆ

ಶಿವಮೊಗ್ಗನಗರದ ಪದವೀಧರ ಸಹಕಾರ ಸಂಘವು50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿವಿದ್ಯಾಲಯದಲ್ಲಿ ಮೂರು ಸ್ವರ್ಣಪದಕ ಪಶ್ರಸ್ತಿಯ ದತ್ತಿನಿಧಿಯನ್ನು ಸ್ಥಾಪಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ಪಿ. ದಿನೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಎಂಬಿಎ, ಎಂಕಾಂ ಮತ್ತು ಎಂಎಸ್‌ಸಿ (ಗಣಿತ) ಈ ಮೂರು ವಿಭಾಗದಲ್ಲಿ ರ್‍ಯಾಂಕ್ ವಿಜೇತರಿಗೆ ತಲಾ ಒಂದು ಲಕ್ಷ ರೂ. ನ 3 ದತ್ತಿನಿಧಿ ಬಹುಮಾನ ಸ್ಥಾಪಿಸಲಾಗಿದೆ. ಮುಂದಿನ ವರ್ಷ ಕಲಾ ವಿಭಾಗದಲ್ಲಿಯೂ ದತ್ತಿನಿಧಿ ಕೊಡುವ ಬಗ್ಗೆ ತೀರ್‍ಮಾನಿಸಲಾಗಿದೆ ಎಂದರು.

ಹಲವಾರು ಸಮಾಜಮುಖಿ ಕೆಲಸದಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಕೊವಿಡ್ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದೆ. ಮೆಗ್ಗಾನ್‌ಗೆ 11 ಟನ್ ತೂಕದ ಆಕ್ಸಿಜನ್ ಟ್ಯಾಂಕರ್ ನೀಡಿದೆ. 3 ಲಕ್ಷ ರೂ. ಗಳ ಆಹಾರದ ಕಿಟ್ ನೀಡಲಾಗಿದೆ ಎಂದ ಅವರು, ಪ್ರಸ್ತುತ ಸಾಲಿನಲ್ಲಿ ಸಂಘವು 1ಕೋಟಿ 59ಸಾವಿರ ರೂ. ನಿವ್ವಳ ಲಾ ಗಳಿಸಿದೆ. 2020-21ರ ಸಾಲಿನಲ್ಲಿ 127,36 ಕೋಟಿ ರೂ. ವ್ಯವಹಾರ ನಡೆಸಿದೆ. 5,51 ಕೋಟಿ ರೂ.ಗಳ ಒಟ್ಟೂ ಆದಾಯ ಗಳಿಸಿದೆ. ಸದಸ್ಯರಿಗೆ 44 ಕೋಟಿಯಷ್ಟು ಸಾಲ ಕೊಡಲಾಗಿದೆ,. ಸಾಲ ವಸೂಲಾತಿ ಉತ್ತಮವಾಗಿದ್ದು, ಎನ್‌ಪಿಎ ಶೇ. 0.76 ರಷ್ಟಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯ್ಷಕೆ ಸ್. ಮಮತಾ, ನಿರ್ದೇಶಕರಾದ ಎಚ್. ಸಿ. ಸುರೇಶ್, ಎಸ್. ಕೆ. ಕೃಷ್ಣಮೂರ್ತಿ, ಎಸ್. ರಾಜಶೇಖರ್, ಡಾ|| ಯು. ಚಂದ್ರಶೇಖರಪ್ಪ, ಯು. ರಮ್ಯಾ, ಡಿ. ಎಸ್. ಭುವನೇಶ್ವರಿ ಮತ್ತು ಕಾರ್‍ಯದರ್ಶಿ ಗೋಪಾಲಕೃಷ್ಣ ಹಾಜರಿದ್ದರು.

ಡಿ. 19ರಂದು ನಗರದ ಸರ್ಜಿ ಕಲ್ಯಾಣಮಂಟಪದಲ್ಲಿ ಸಂಘದ ಸರ್ವಸದಸ್ಯರ ಸಭೆಯನ್ನು ಕರೆಯಲಾಗಿದೆ. ಬೆಳಿಗ್ಗೆ ೯:೩೦ಕ್ಕೆ ಸಭೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಸದಸ್ಯರಿಗೆ ಉಚಿತ ವ್ಯಾಕ್ಸಿನ್ ಶಿಬಿರ ಏರ್ಪಡಿಸಲಾಗಿದೆ. ಸಂಘದ ಸುವರ್ಣ ಮಹೋತ್ಸವದ ನೆನೆಪಿಗಾಗಿ ಕೃಷಿನಗರದಲ್ಲಿ 40&60 ಅಳತೆಯ ನೂತನ ಶಾಖಾ ಕಚೇರಿ ಮತ್ತು ಉದ್ದೇಶಿತ ವಿದ್ಯಾಸಂಸ್ಥೆಯ ಆಡಳಿತ ಕಚೇರಿಯನ್ನು ನಿರ್‍ಮಿಸಲಾಗುವುದು. ಇದಕ್ಕೆ ಜನವರಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು.

  • ಎಸ್. ಪಿ. ದಿನೇಶ್, ಅಧ್ಯಕ್ಷ


Ad Widget

Related posts

ಕುವೆಂಪು ವಿವಿ ದೇಶದ 56ನೇ ಶ್ರೇಷ್ಠ ಸಂಶೋಧನಾ ಸಂಸ್ಥೆ

Malenadu Mirror Desk

ವರ್ಷವಿಡೀ ಗೋಪಾಲಗೌಡರ ಜನ್ಮಶತಮಾನೋತ್ಸವ, ಮಾ.20ರಂದು ತೀರ್ಥಹಳ್ಳಿಯಲ್ಲಿ ಮಾತು ಮಂಥನ

Malenadu Mirror Desk

ಏಪ್ರಿಲ್‍ಗೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.