Malenadu Mitra
ರಾಜ್ಯ ಶಿವಮೊಗ್ಗ

ಬೆಂಕಿ ಆರಿಸುವವರಿದ್ದಾಗಲೇ ಸಮಾಜದ ಉನ್ನತಿ ಸಾಧ್ಯ: ಸ್ವಾಮಿ ವಚನಾನಂದ

ಬೆಂಕಿ ಹಚ್ಚುವವರ ನಡುವೆ ಬೆಂಕಿ ಆರಿಸುವವರಿದ್ದಾಗಲೇ ಸಮಾಜದ ಉನ್ನತಿ ಸಾಧ್ಯ. ಆದರೆ ಇಂತಹ ಸಂಸ್ಕಾರದ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದ್ದು, ಅದನ್ನು ಇಂತಹ ಶರಣ ಸಂಗಮ ಕಾರ್ಯಕ್ರಮಗಳಿಂದ ದೂರ ಮಾಡಬಹುದು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಮಹಾಸ್ವಾಮಿಗಳು ನುಡಿದರು.
ಕುವೆಂಪು ರಂಗಮಂದಿರದಲ್ಲಿ 263 ನೇ ಶರಣ ಸಂಗಮ  ಶರಣ ಹುಣಸಘಟ್ಟದ ಮಾಜಿ ಶಾಸಕ ಹೆಚ್.ಎಂ. ಮಲ್ಲಿಕಾರ್ಜುನಪ್ಪ, ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶರಣೆ ಶಾರದಾ ಹೆಚ್.ಎಂ. ಚಂದ್ರಶೇಖರಪ್ಪ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಲಿತವರೇ ಹೆಚ್ಚಾಗಿ ಸಮಾಜದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.  ಇದನ್ನು ಸಂಪೂರ್ಣ ಆರಿಸುವ ಶಕ್ತಿ  ಎಲ್ಲರಲ್ಲೂ ಇಲ್ಲದಿದ್ದರೂ ನಾವು ಬೆಂಕಿ ಆರಿಸಲು ಮಾಡುವ ಪ್ರಯತ್ನ ಮುಖ್ಯವಾಗುತ್ತದೆ ಇದನ್ನೇ ಸಂಸ್ಕಾರ ಎನ್ನುತ್ತಾರೆ.
ಹೆಚ್‌ಎಂಸಿ ಕುಟುಂಬ ಇಂತಹ ಸಂಸ್ಕಾರ ಹೊಂದಿದೆ. ಹೆಚ್‌ಎಂಸಿಯವರು ಶಾಸಕರಾಗಿದ್ದಾಗ ಗಾಜನೂರಿನಲ್ಲಿ ತುಂಗಾ ಡ್ಯಾಂ ಕಟ್ಟಿಸಿ ಶಾಶ್ವತವಾಗಿ ಶಿವಮೊಗ್ಗ  ನಗರಕ್ಕೆ  ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ. ಅವರಂತೆ ಅವರ ಪುತ್ರ ಕಾರ್ಪೋರೇಟರ್ ಯೋಗೀಶ್ ಅವರು ಸಂಕಷ್ಟದಲ್ಲಿದ್ದ ಕುಟುಂಬದ ವಿದ್ಯಾರ್ಥಿನಿ ನಿಧಿಶ್ರೀಯ ಉನ್ನತ ವ್ಯಾಸಂಗದ ವೆಚ್ಚ 2ವರೆ ಲಕ್ಷರೂಗಳನ್ನು ಇಂದಿನ ಕಾರ್ಯಕ್ರಮದಲ್ಲಿ ನೀಡುವ ಮೂಲಕ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಶಿಸಿದರು.
ಪ್ರತಿಯೊಬ್ಬರೂ ಸಾವಿನತ್ತ ಪ್ರಯಾಣಿಸಲೇ ಬೇಕು. ಆದರೆ ಇಲ್ಲಿ ಇರುವವರೆಗೆ ಒಳಿತನ್ನು ಮಾಡಬೇಕು. ಸಮಾಜಕ್ಕಾಗಿ ಸತ್ಕಾರ್ಯಗಳನ್ನು ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಆರೋಗ್ಯವಂತರು ಇಂದು ಹೃದಯಾಘಾತದಿಂದ ಸಾವನ್ನಪ್ಪುತ್ತಿರು ವುದು ಹೆಚ್ಚಾಗಿದೆ. ಪ್ರತಿಯೊಬ್ಬರು ಕೇವಲ ಶಾರೀರಿಕ ಆರೋಗ್ಯದ ಕಡೆ ಮಾತ್ರ ಗಮನಹರಿಸಿ ಮಾನಸಿಕ ಆರೋಗ್ಯವನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ಬಸವಕೇಂದ್ರದ ಶ್ರೀ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಧರ್ಮ, ಸಮಾಜ, ರಾಜಕಾರ, ಆಧ್ಯಾತ್ಮಗಳು ಪ್ರಕ್ಷುಬ್ದವಾಗುತ್ತಿರುವ ಈ ಸಂದರ್ಭಕ್ಕೆ ವಚನಗಳಲ್ಲಿನ ಮೌಲ್ಯಗಳು ಪರಿಹಾರ ಒದಗಿಸುತ್ತವೆ ಎಂದರು.
ಉಪನ್ಯಾಸ ನೀಡಿದ ಸಾಹಿತಿ ಚಟ್ನಳ್ಳಿ ಮಹೇಶ್, ದೇವರು ಪ್ರತಿಯೊಬ್ಬರಿಗೂ ಒಂದೊಂದು ವೃತ್ತಿ ನೀಡುತ್ತಾನೆ, ಅದು ದೊಡ್ಡದು ಚಿಕ್ಕದು ಎಂದು ಯೋಚಿಸದೆ  ಅದನ್ನು ಪ್ರಾಮಾಣಿಕವಾಗಿ ಮಾಡಿದರೆ ಸಮಾಜ ಆರೋಗ್ಯಕರವಾಗಿರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಧ್ಯಮ ಅಕಾಡೆಮಿ ಸದಸ್ಯರಾದ ಗೋಪಾಲ್ ಯಡಗೆರೆ, ಕೆ.ವಿ. ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ರವಿ ಮಾತನಾಡಿದರು.
  ಇನ್ನೋಸಿಸ್‌ನ ತರಬೇತಿ ವಿಭಾಗದ ಪ್ರಾಂಶುಪಾಲರಾದ ಡಿ.ಎಲ್. ಲಕ್ಷ್ಮೀರವರಿಗೆ ಸನ್ಮಾನಿಸಲಾಯಿತು. ಹೆಚ್.ಎಂ. ಮಲ್ಲಿಕಾರ್ಜುನ ಟ್ರಸ್ಟ್‌ನಿಂದ ನಿಧಿಶ್ರೀ ವಿದ್ಯಾರ್ಥಿನಿಯ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು 2ವರೆ ಲಕ್ಷರೂ.ಗಳನ್ನು  ನೀಡಲಾಯಿತು. ಅಕ್ಕನ ಬಳಗದಿಂದ ವಚನ ಗಾಯನ ನಡೆಯಿತು.
ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ  ಸ್ವಾಗತಿಸಿದರು. ಕಾರ್ಪೋರೇಟರ್ ಹೆಚ್.ಸಿ. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಕೆಲಸ ನಾವು ಸತ್ತ ನಂತರವೂ ಶಾಶ್ವತವಾಗಿ ಇರುವಂತಿರಬೇಕು. ಇಂತಹ ಕೆಲಸ ಮಾಡಿದ್ದಕ್ಕಾಗಿಯೇ ಪುನೀತ್ ರಾಜ್‌ಕುಮಾರ್ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ

– ಶ್ರೀ ವಚನಾನಂದ ಮಹಾಸ್ವಾಮಿಗಳು

Ad Widget

Related posts

ಮನೆಮನೆಗೆ ಗಂಗೆ ಯೋಜನೆಯಡಿ ಎಲ್ಲ ಹಳ್ಳಿಗಳಿಗೂ ನೀರು: ಸಚಿವ ಕೆ.ಎಸ್. ಈಶ್ವರಪ್ಪ

Malenadu Mirror Desk

ರಾಜಕೀಯಕ್ಕೆ ಯುವಪಡೆಯನ್ನೇ ಕೊಟ್ಟ ಕೀರ್ತಿ ಭಂಡಾರಿಯವರದು: ಎಂ.ಬಿ.ಪಾಟೀಲ್ ಮಂಜುನಾಥ್ ಭಂಡಾರಿಗೆ ಹೃದಯಸ್ಪರ್ಶಿ ಸನ್ಮಾನ

Malenadu Mirror Desk

ಕೋವಿಡ್ ನಿಯಂತ್ರಣಕ್ಕೆ ಸರ್ಕಾರದಿಂದ ಸರ್ವ ರೀತಿಯ ನೆರವು: ಸಂಸದ ಬಿ.ವೈ.ರಾಘವೇಂದ್ರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.