Malenadu Mitra
ರಾಜ್ಯ ಶಿವಮೊಗ್ಗ

ಗ್ರಾಪಂಗಳಿಗೆ ಬಲ ತುಂಬಬೇಕಿದೆ :ಸಂವಾದದಲ್ಲಿ ನೂತನ ಎಂಎಲ್‌ಸಿ ಡಿ. ಎಸ್.ಅರುಣ್ ಹೇಳಿಕೆ

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿಯ ಗುರಿ ನನ್ನದು.  ಅಲ್ಲಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದರ ಜೊತೆಗೆ  ಡಿಜಿಟಲೀಕರಣ, ನಾನಾ ದಾಖಲಾತಿಗಳು ಗ್ರಾಪಂನಲ್ಲೇ ಸಿಗುವಂತೆ ಮಾಡುವುದು, ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಬಗರ್‌ಹುಕುಂ, ಕೆರೆ ಒತ್ತುವರಿ, ಮೂಲ ಸೌಕರ್‍ಯಗಳತ್ತ ಗಮನಹರಿಸುತ್ತೇನೆ  ಎಂದು ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಡಿ.ಎಸ್. ಅರುಣ್ ಹೇಳಿದರು.


ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು,  ಗ್ರಾಮೀಣ ಜನರ ನಿರೀಕ್ಷೆಯನ್ನು ಸಾಕಾರಗೊಳಿಸುವ ಕೆಲಸಕ್ಕೆ ಆದ್ಯತೆ ಕೊಡುತ್ತೇನೆ.  ಸಾಕಷ್ಟು ಸಮಸ್ಯಗೆಳಿರುವುದು ನಿಜವಾದರೂ ಮೊದಲು ಗ್ರಾಪಂಗಳಿಗೆ ಬಲ ತುಂಬಬೇಕಿದೆ. ನೆಟ್ಸವರ್‍ಕ್ ಸಮಸ್ಯೆ ಜೊತೆಗೆ ಡಿಜಿಟಲೀಕರಣ ಅಗತ್ಯವಾಗಿ ಬೇಕಾಗಿದೆ.  ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಮೊಬೈಲ್ ನೆಟ್ ವರ್‍ಕ್ ಸಿಕ್ಕರೆ ಅನೇಕ ಸೇವೆಗಳು ಶಕ್ತಿಯುತವಾಗಿ ಬೇಗ ನಡೆಯುತ್ತವೆ  ಎಂದರು.

362 ಗ್ರ್ರಾಪಂಗಳು ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಇಲ್ಲಿ ಶೇ. 50ರಷ್ಟು ಡಿಜಿಟಲ್ ಆಗಿದೆ. ಆದರೆ ಸರಿಯಾದ ವ್ಯವಸ್ಥೆಯ ಮೂಲಕ ಕೆಲಸ ನಡೆಯುತ್ತಿಲ್ಲ.  ವಿವಿಧ ಪ್ರಮಾಣ ಪತ್ರಗಳು ಸಾರ್ವಜನಿಕರಿಗೆ ಗ್ರಾಪಂನಲ್ಲೇ ಲಭ್ಯವಾಗಬೇಕು. ಇದರಿಂದ ಅವರು ನಗರಕ್ಕೆ ಅಲೆಯುವುದು ತಪ್ಪುತ್ತದೆ ಎಂದ ಅವರು, ಗ್ರಾಪಂ ಸದಸ್ಯರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಸgಕಾರದ ಮಟ್ಟದಲ್ಲಿ  ಪ್ರಯತ್ನಿಸಬೇಕಿದೆ.  ಇದಕ್ಕಾಗಿ ಪ್ರತಿ ಗ್ರಾಪಂಗೂ ಫೆ. 15 ರ ನಂತರ ಭೇಟಿ ಕೊಡುತ್ತೇನೆ. ಅವರಿಗಾಗಿ ಕಾರ್‍ಯಾಗಾರ ಏರ್ಪಡಿಸುವುದಾಗಿ ಹೇಳಿದರು.
ತಮ್ಮ ರಾಜಕೀಯ ಜೀವನ ಕುರಿತು ಮಾತನಾಡಿದ  ಅವರು, ಮನೆಯಲ್ಲೇ ರಾಜಕೀಯದ ದೀಕ್ಷೆ ಪಡೆದೆ. 2005ರಲ್ಲಿ ರಾಜಕೀಯಕ್ಕೆ ಕಾಲಿಟ್ಟೆ.  ಪಕ್ಷವು ಹಲವಾರು ಹುದ್ದೆಯನ್ನು ನೀಡಿದೆ. ಆ ಜವಾಬ್ದಾರಿಗಳನ್ನೆಲ್ಲ ಸರಿಯಾಗಿ ನಿಭಾಯಿಸಿದ್ದೇನೆ. ಅದರಲ್ಲೂ ಎರಡು ವರ್ಷದ ಹಿಂದೆ ಆರ್‍ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗುವ ಮೂಲಕ ಇನ್ನಷ್ಟು ರಾಜಕೀಯ ಶಕ್ತಿ ತನಗೆ ದೊರೆತಿದೆ. ಇದನ್ನೆಲ್ಲ ಪಕ್ಷ ಗುರುತಿಸಿದೆ. ಟಿಕೆಟ್ ನೀಡಿದಾಗ ಪಕ್ಷದ ಕಾರ್‍ಯಕರ್ತರೊಂದಿಗೆ ಬೆರೆತು ಕೆಲಸ ಮಾಡಿದೆ. ಇದರಿಂದ ಗೆಲುವು ಲಭಿಸಿತು. ಪಕ್ಷದ ವಿವಿಧ ಸ್ತರದಲ್ಲಿ ಕೆಲಸ ಮಾಡುವಾಗ ಗ್ರಾಮೀಣ ಜನರ ಸಂಪರ್ಕ ಸಿಕ್ಕಿದೆ. ವೈಟ್ ಕಾಲರ್ ಎಂಬ ಮಾತು ಕೇಳಿಬಂದಿತ್ತಾದರೂ  ಗ್ರಾಮೀಣ ಸಂಪರ್ಕದಿಂದ ಅದು ಇಲ್ಲವಾಗಿದೆ ಎಂದರು.
ಪಾಸ್ತಾವಿಕ ಮಾತನಾಡಿದ ಟ್ರಸ್ಟ್ ಅಧ್ಯಕ್ಷ್ಷ ಎನ್. ಮಂಜುನಾಥ, ಅರುಣ್  ಅವರದ್ದು ಸಜ್ಜನಿಕೆ ಕುಟುಂಬ. ತಂದೆ ಡಿ. ಎಚ್. ಶಂಕರಮೂರ್ತಿ ಹಲವು ರಾಜಕಾರಣಿಗಳಿಗೆ ಮಾರ್ಗದರ್ಶಕರು. ಈಗ ಅವರ ಮಗ ಎಂಎಲ್ ಸಿ ಆಗಿದ್ದಾರೆ.  ಸಾಕಷ್ಟು ಸಮಸ್ಯೆಗಳು, ಸವಾಲುಗಳು ಅವರೆದುರಿವೆ. ಅದನ್ನೆಲ್ಲ ಪ್ರೀತಿಯಿಂದಲೇ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಕಾರ್‍ಯದರ್ಶಿ ನಾಗರಾಜ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೇರಿ ಹಾಜರಿದ್ದರು.


Ad Widget

Related posts

ಹಿಜಾಬ್ ಪ್ರತಿಭಟನೆ ಯಥಾಸ್ಥಿತಿ , ಬೇಟಿ ಬಚಾವೊ ,ಬೇಟಿ ಪಡಾವೊ ಅಂತಿರಿ ಕಾಲೇಜಿಗೆ ಬಿಡುತ್ತಿಲ್ಲ: ವಿದ್ಯಾರ್ಥಿನಿಯರು

Malenadu Mirror Desk

ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ; ಹಾನಿ ಪರಿಶೀಲನೆ,418 ಕೋಟಿ ರೂ.ಆಸ್ತಿಪಾಸ್ತಿ ನಷ್ಟದ ಅಂದಾಜು

Malenadu Mirror Desk

79 ನೇ ವಸಂತಕ್ಕೆ ಬಿಎಸ್‌ವೈಗೆ ಶುಭಾಶಯಗಳ ಮಹಾಪೂರ, ರಾಜ್ಯಪ್ರವಾಸ ಮಾಡುವೆ ಎಂದ ರಾಜಾಹುಲಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.