ಶಿವಮೊಗ್ಗ,ಜ.೫: ಕಾಡಾನೆ ಹಾವಳಿ ಅತಿಯಾಗುತ್ತಿದ್ದು, ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಅತೀ ಸಮೀಪದ ಆಲದೇವರ ಹೊಸೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆನೆಗಳ ಪರೇಡ್ ನಿರಂತರವಾಗಿದೆ.
ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಲಾಪುರ ಮತ್ತು ಆಲದೇವರ ಹೊಸಳ್ಳಿಯಲ್ಲಿ ರೈತರ ಬೆಳೆ ಹಾನಿ ಮಾಡತೊಡಗಿವೆ. ಕಿಮ್ಮನೆ ಗಾಲ್ಫ್ ಕ್ಲಬ್‌ಗೆ ಹೊಂದಿಕೊಂಡೇ ಇರುವ ಹೊಸೂರಿನ ಅಡಕೆ ತೋಟಕ್ಕೆ ನುಗ್ಗಿರುವ ಆನೆಗಳು ಅಡಕೆ ಮರ ಧ್ವಂಸ ಮಾಡಿವೆ. ಜನವಸತಿ ಪ್ರದೇಶಕ್ಕೆ ಹತ್ತಿರವೇ ಬರುತ್ತಿರುವ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ
ಪುರದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ದಶಕಗಳಿಂದಲೂ ಇದೆ. ಶೆಟ್ಟಿಹಳ್ಳಿ ಅಭಯಾರಣ್ಯದೊಳಗೆ ಇದ್ದ ಆನೆಗಳು ಈಗ ಗ್ರಾಮಗಳಿಗೇ ಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರ ಬೆಳೆಯನ್ನು ಹಾನಿ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಯವರು ತುರ್ತು ಕ್ರಮ ಕೈಗೊಳ್ಳಬೇಕು
ಹೆಬ್ಬೂರ್ ನಾಗರಾಜ್, ರೈತ ಮುಖಂಡರು, ಪುರದಾಳು