Malenadu Mitra
ರಾಜ್ಯ ಶಿವಮೊಗ್ಗ

ಹಿರಿಯ ಸಾಹಿತಿ,ಹೋರಾಟಗಾರ ಚಂಪಾ ನಿಧನ: ಪ್ರಖರ ಬರಹಗಾರ, ನಿಷ್ಠುರ ಸಿದ್ಧಾಂತಿಯನ್ನು ಕಳೆದುಕೊಂಡು ಕರುನಾಡು

ಕನ್ನಡದ ಕಟ್ಟಾಳು, ಕವಿ, ನಾಟಕಕಾರ, ಹೋರಾಟಗಾರ ಪ್ರೊ.ಚಂದ್ರಶೇಖರ್ ಪಾಂಟೀಲ್(ಚಂಪಾ) ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ೮೩ ವಯೋಮಾನದ ಅವರಿಗೆ ವಯೋಸಹಜ ಅನಾರೋಗ್ಯದ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಶ್ರಾಂತ ಅಧ್ಯಾಪಕರಾಗಿದ್ದ ಚಂಪಾ ಅವರು ಗೋಕಾಕ್ ಚಳವಳಿಯಿಂದ ಹಿಡಿದು ಕನ್ನಡ ನಾಡಿನ ಎಲ್ಲ ಜನಪರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಸಮಾಜವಾದಿ ಸಿದ್ದಾಂತ ಪ್ರತಿಪಾದಕರಾಗಿದ್ದ ಅವರು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ಎಂದೂ ನಡೆದುಕೊಂಡವರಲ್ಲ. ತಮ್ಮ ಮಾತು ಮತ್ತು ಬರಹದಲ್ಲಿನ ಪ್ರಕರತೆಯಿಂದಾಗಿ ರಾಜ್ಯದಲ್ಲಿ ದೊಡ್ಡ ಅಭಿಮಾನಿಬಳಗವನ್ನು ಚಂಪಾ ಹೊಂದಿದ್ದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗಿದ್ದ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಸಂಕ್ರಮಣ ಎಂಬ ಸಾಹಿತ್ಯ ಬರಹಗಳ ಮಾಸಿಕ ಪತ್ರಿಕೆಯನ್ನು ಅವರು ನಡೆಸುತ್ತಿದ್ದರು. ಆ ಮೂಲಕ ನಾಡಿನ ಅನೇಕ ಯುವ ಬರಹಗಾರರನ್ನು ಪ್ರೋತ್ಸಾಹಿಸಿದ್ದರು.

ಸರಕಾರಕ್ಕೇ ಸವಾಲು:


ಶಿವಮೊಗ್ಗದಲ್ಲಿ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಉಪಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗರ ವಿರೋಧದ ನಡುವೆಯೂ ಗೌರಿ ಲಂಕೇಶ್ ಹಾಗೂ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರಿಗೆ ವಿಚಾರ ಸಂಕಿರಣದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದರು. ಪರಿಷತ್ ಅಧ್ಯಕ್ಷರಾಗಿದ್ದ ಅವರ ಮೇಲೆ ಎಷ್ಟೇ ಒತ್ತಡ ಬಂದಿದ್ದರೂ ಸಾಹಿತ್ಯ ಪರಿಷತ್ ಒಂದು ಕನ್ನಡ ಕಟ್ಟುವ ಸ್ವಾಯತ್ತ ಸಂಸ್ಥೆ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದರು.
ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ, ಬಸವಶ್ರೀ, ಕನ್ನಡ ಕುಭೂಷಣ, ಸಂದೇಶ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಅವರು ೨೦೧೭ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದರು.

Ad Widget

Related posts

ಕೊರೋನಾ ಹತೋಟಿಗೆ ಕ್ಷಿಪ್ರಕಾರ್ಯ : ಕುಮಾರ್ ಬಂಗಾರಪ್ಪ

Malenadu Mirror Desk

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಜ್ಞಾನ, ಶಕ್ತಿ ಇದೆ

Malenadu Mirror Desk

ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ : ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.