ಶಿವಮೊಗ್ಗ ನಗರದ ಜೆಹೆಚ್ ಪಟೇಲ್ ಬಡಾವಣೆಯಲ್ಲಿ ಪಂಚಮುಖಿ ದೇಗುಲದಲ್ಲಿ ಸಂಸದ ಬಿ.ವೈ ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸಹಕಾರದಿಂದು ನೀರಾವರಿ ನಿಗಮದ ಅನುದಾನದಲ್ಲಿ ಯಾಗ ಶಾಲೆ ನಿರ್ಮಾಣ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾಗಶಾಲೆಗೆ ಭೂಮಿ ಪೂಜೆ ನೆರವೇರಿಸಿದ್ದರು.
ಯಾಗ ಶಾಲೆಯಲ್ಲಿ ಏಕಕಾಲಕ್ಕೆ ಯಾಗ ನಡೆಸಬಹುದಾದ ರೀತಿಯಲ್ಲಿ ಮೂರು ಹೋಮ ಕುಂಡಗಳನ್ನು ನವೀನ ರೀತಿಯಲ್ಲಿ ನಿರ್ಮಿಸಲಾಗಿದೆ. ಸೋಮವಾರ ವಿಶಾಲ ಯಾಗಶಾಲೆ ಹಾಗೂ ಹೋಮಕುಂಡವನ್ನು ಜಿಲ್ಲಾ ಉಸ್ತವಾರಿ ಸಚಿವ ಲೋಕಾರ್ಪಣೆ ಗೊಳಿಸಿದರು. ಲೋಕಾರ್ಪಣೆ ನಿಮಿತ್ತ ಲಕ್ಷ್ಮೀ ನರಸಿಂಹ ಸುದರ್ಶನ ಹವನ ಏರ್ಪಡಿಸಲಾಗಿತ್ತು. ಉದ್ಯಮಿ ಸುರೇಶ್ ಕೆ ಬಾಳೆಗುಂಡಿ ಹಾಗೂ ಮಮತಾ ಸುರೇಶ್ ಬಾಳೆಗುಂಡಿ ಅವರು ಪೂರ್ಣಾಹುತಿ ನೆರವೇರಿಸಿದರು. ಧರ್ಮದರ್ಶಿ ವೇ.ಬ್ರ. ಕೆ.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರೆವೇರಿದವು.
previous post