ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಅಬ್ಬರ ಮುಂದುವರಿದಿದ್ದು,ಮಂಗಳವಾರವೂ133 ಪ್ರಕರಣಗಳು ದಾಖಲಾಗಿದ್ದು, ಸತತ ನಾಲ್ಕನೇ ದಿನ ಶತಕದಾಟಿದೆ. ಓಂ ಶಕ್ತಿ ಭಕ್ತರಿಂದ ಆಮದಾದ ಸೋಂಕು ಈಗ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದ್ದು, ಅಧಿಕಾರಿಗಳು ಭಕ್ತರಿಂದ ಬರುತ್ತಿರುವ ಪ್ರಕರಣಗಳ ಅಂಕಿಸಂಕಿಗಳನ್ನು ಪ್ರತ್ಯೇಕವಾಗಿ ತೋರಿಸದೆ ಜಾಣತನ ತೋರಿಸುತ್ತಿದ್ದಾರೆನ್ನಲಾಗಿದೆ. ಒಟ್ಟಾರೆಯಾಗಿ ಈಗ ದಾಖಲೆ ತೋರಿಸುತ್ತಿದ್ದು, ಶಿವಮೊಗ್ಗ ನಗರದಲ್ಲಿ ಒಂದೇ ದಿನ 84 ಪ್ರಕರಣಗಳು ದಾಖಲಾಗಿವೆ. ಭದ್ರಾವತಿಯಲ್ಲಿ 20 ತೀರ್ಥಹಳ್ಳಿ 6, ಶಿಕಾರಿಪುರ 5, ಸಾಗರ 11 , ಹೊಸನಗರ3 ,ಸೊರಬದಲ್ಲಿ 4 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ 548 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
next post