ಹಿಂದುಳಿದ ವರ್ಗಗಳಿಗೆ ರಾಜಕೀಯ ಸಮಾನತೆ ಮತ್ತು ರಾಜಕೀಯ ಸ್ಥಾನಮಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಗೋಪಾಲಗೌಡ ಬಡಾವಣೆಯ ಕಾಂಗ್ರೆಸ್ ಮುಖಂಡ ರಾಜಶೇಖರ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿಲ್ಲ, ಹಿಂದುಳಿದ ವರ್ಗಗಳಿಗೆ ಸವಲತ್ತು ನೀಡುವ ಮೂಲಕ ಅವರ ಅಭ್ಯುದಯವನ್ನು ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿದೆ. ಪಕ್ಷ ಅಧಿಕಾರದಲ್ಲಿದಂತಹ ಸಂದರ್ಭಗಳಲ್ಲೆಲ್ಲ ಹತ್ತು ಹಲವಾರು ಯೋಜನೆಗಳನ್ನು ನೀಡುವ ಮೂಲಕ ಆ ವರ್ಗಕ್ಕೆ ಸ್ವಾಭಿಮಾನದ ಬದುಕು ನೀಡಿದೆ ಎಂದರು.
ಬಿಜೆಪಿಯ ನಕಲಿ ಹಿಂದುತ್ವದ ವಿರುದ್ಧ ಸಾಂಘಿಕ ಹೋರಾಟ ತುಂಬಾ ಅಗತ್ಯವಾಗಿ ಆಗಬೇಕಾಗಿದೆ. ಹಿಂದುಳಿದ ವರ್ಗಗಳ ಬಗ್ಗೆ ಅವರಿಗಿರುವ ನಕಲಿತನವನ್ನು ಆ ವರ್ಗದ ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಪಕ್ಷದ ಹಿಂದುಳಿದ ಮುಖಂಡರು ಮಾಡಬೇಕಾಗಿದೆ ಎಂದು ಸುಂದರೇಶ್ ಹೇಳಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ಹೆಚ್. ಆರ್. ಮಹೇಂದ್ರ ಅವರನ್ನು ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿಯನ್ನಾಗಿ ನೇಮಿಸಿ ಆದೇಶ ಪತ್ರ ನೀಡಲಾಯಿತು.ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್,
ಕಾಂಗ್ರೆಸ್ ಮುಖಂಡರಾದ ಜಿ. ಡಿ. ಮಂಜುನಾಥ್, ಎಸ್. ಟಿ.ಚಂದ್ರಶೇಖರ್, ಮುಡುಬ ರಾಘವೇಂದ್ರ, ಟಿ .ಡಿ. ಜಿತೇಂದ್ರಗೌಡ, ಆರ್. ರಾಜಶೇಖರ್, ಆರ್. ರಾಘವೇಂದ್ರ, ಕವಿತಾ, ನಸೀಮಾ, ಹೆಚ್. ರಾಜಕುಮಾರ್, ನಾಗೇಶ್, ಶಿವಮೂರ್ತಿ, ಬಿ. ಆರ್. ಶಂಕರಪ್ಪ ,ಉಮಾಪತಿ, ಸುಧಾಕರ್ ಪಾವಸ್ಕರ್, ಮುರುಳಿ, ಜ್ಯೋತಿ ಡಿಸೋಜಾ, ಪ್ರೇಮ ಮತ್ತಿತರರಿದ್ದರು.