ಖ್ಯಾತ ಗಮಕ ಕಲಾವಿದ ಹೆಚ್.ಆರ್.ಕೇಶವಮೂರ್ತಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ.
ಮಂಗಳವಾರ ಕೇಂದ್ರ ಸರಕಾರ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ರಾಜ್ಯದ ನಾಲ್ವರು ಈ ಗೌರವಕ್ಕೆ ಬಾಜನರಾಗಿದ್ದು, ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಗಮಕ ಕಲೆಗೆ ಸಿಕ್ಕ ಶ್ರೇಷ್ಠ ಮನ್ನಣೆಯಾಗಿದೆ.
ಗಮಕ ಪದ್ಯ ವಾಚನ ಮತ್ತು ಅರ್ಥದಾರಿಕೆಯ ಮೂಲಕ ದೇಶದ ಗಮನ ಸೆಳೆದಿದ್ದ ಕೇಶವಮೂರ್ತಿ ಅವರು, ಮತ್ತೂರು ಕೃಷ್ಣಮೂರ್ತಿ ಮತ್ತು ಮಾರ್ಕಂಡೇಯ ಅವಧಾನಿಗಳೊಂದಿಗೆ ಗಮಕ ವಾಚನ ಸರಣಿಗಳನ್ನು ದೂರದರ್ಶನದಲ್ಲಿ ನಡೆಸಿಕೊಡುತ್ತಿದ್ದರು. ಗಮಕ ಕಲೆಗೆ ಪ್ರೋತ್ಸಾಹ ನೀಡುವ ಮತ್ತು ಈ ಕಲೆಯನ್ನು ಯುವಜನಾಂಗಕ್ಕೆ ದಾಟಿಸುವ ನಿಟ್ಟಿನಲ್ಲಿ ಕೇಶವಮೂರ್ತಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.
ಅಭಿನಂದನೆ:
ಕೇಶಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಗಮಕ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕೇಶವಮೂರ್ತಿ ಅವರಿಗೆ ಈ ಪುರಸ್ಕಾರ ಸಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಕೇಶವಮೂರ್ತಿ ಅವರು ಈ ಕಲೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುತ್ತಿದ್ದಾರೆ ಅವರ ಕಲಾಸೇವೆ ಮಾದರಿಯಾದುದು ಎಂದು ಜ್ಞಾನೇಂದ್ರ ಹರ್ಷವ್ಯಕ್ತಪಡಿಸಿದ್ದಾರೆ.
previous post