Malenadu Mitra
ರಾಜ್ಯ ಶಿವಮೊಗ್ಗ

ನಾನು ಜನರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವೆ: ಡಾ.ಸೆಲ್ವಮಣಿ

ಶಿವಮೊಗ್ಗದಲ್ಲಿ ಕೆಲಸ ಮಾಡುವುದು ಪ್ರತಿಷ್ಠೆ, ಪತ್ರಿಕಾ ಸಂವಾದದಲ್ಲಿ ಜಿಲ್ಲಾಧಿಕಾರಿ ಆಶಯ

ಯಾವುದೇ ಉನ್ನತ ಅಧಿಕಾರಿಗೂ ಮಲೆನಾಡಿನ ಕಳಶ ಪ್ರಾಯವಾದ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡಬೇಕೆಂಬುದು ಬಯಕೆ ಇರುತ್ತದೆ. ಕಲೆ ಸಾಹಿತ್ಯ, ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗಕ್ಕೆ ರಾಜ್ಯದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬಂದಿರುವ ನನಗೂ ಬಹಳಷ್ಟು ನಿರೀಕ್ಷೆಯೂ ಇದೆ. ಸರಕಾರದ ನೀತಿ ನಿಯಮಗಳನ್ವಯ ಜನ ಪ್ರೀತಿಯ ಆಡಳಿತ ನೀಡುವ ಉದ್ದೇಶ ಹೊಂದಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.
ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕೋಲಾರ ,ಮಂಗಳೂರುಗಳಲ್ಲಿ ಕೆಲಸ ಮಾಡಿರುವ ಅನುಭವ ಇದೆ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡುವುದು ಒಂದು ಸವಾಲು ಎಂದು ಭಾವಿಸಿಯೇ ಇಲ್ಲಿಗೆ ಬಂದಿದ್ದೇನೆ. ಜಿಲ್ಲೆಯ ಸಂಪೂರ್ಣ ಮಾಹಿತಿ, ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಜನಸ್ಮೇಹಿ ಆಡಳಿತ ಮತ್ತು ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಗರ್‌ಹುಕುಂ, ಅರಣ್ಯ ಹಕ್ಕು ಕಾಯಿದೆ, ಮಂಗನ ಕಾಯಿಲೆ, ಮರಳುಗಾರಿಕೆ, ಕಾನೂನು ಸುವ್ಯವಸ್ಥೆ ಹೀಗೆ ಎಲ್ಲವನ್ನೂ ಅರಿಯುವ ಪ್ರಯತ್ನ ಮಾಡಿದ್ದೇನೆ. ಈಗಾಗಲೇ ಅಧಿಕಾರಿಗಳು ಸಭೆ ನಡೆಸಿದ್ದೇನೆ. ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳು ಗಂಭೀರವಾಗಿವೆ. ಭೂಮಿ ಪೋಡಿ ಸಮಸ್ಯೆ ಇದೆ ಈ ಬಗ್ಗೆ ಎಡಿಸಿ ಅವರಿಗೆ ಸಮಗ್ರ ಮಾಹಿತಿ ಪಡೆಯಲು ಸೂಚಿಸಿದ್ದೇನೆ. ಜಿಲ್ಲೆಯ ಶಾಸಕರು , ಸಚಿವರುಗಳ ಸಲಹೆ ಸಹಕಾರದಿಂದ ಜನಪರ ಕೆಲಸ ಮಾಡುವ ಆಶಯ ನನ್ನದು ಎಂದು ಸೆಲ್ವಮಣಿ ಹೇಳಿದರು.

ಸಾರ್ವಜನಿಕರು ಕಚೇರಿ ವೇಳೆಯಲ್ಲಿ ಯಾವಾಗ ಬೇಕಾದರೂ ತಮ್ಮನ್ನು ಭೇಟಿಯಾಗ ಬಹುದು ಎಂದ ಅವರು, ಸಾರ್ವಜನಿಕರ ಭೇಟಿಗೆ ಯಾವುದೇ ಸಮಯ ನಿಗದಿಪಡಿಸುವುದಿಲ್ಲ, ಸಭೆ ಇದ್ದ ಸಂದರ್ಭದಲ್ಲಿ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ಹೊರತುಪಡಿಸಿದರೆ ಕಚೇರಿಯಲ್ಲಿ ಇದ್ದಾಗ. ಸಾರ್ವಜನಿಕರು ತಮ್ಮನ್ನು ಭೇಟಿಯಾಗಿ ಅಹವಾಲು ಸಲ್ಲಿಸಬಹುದು. ನಾನು ಜನರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಬಯಕೆ ಹೊಂದಿದ್ದೇನೆ ಎಂದು ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಕುರಿತು ಈಗಾಗಲೇ ಸಭೆ ನಡೆಸಿದ್ದೇನೆ. ಗುಣಮಟ್ಟವನ್ನು ಕಾಯ್ದುಕೊಂಡು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ರಜೆ ದಿನಗಳಲ್ಲಿಯೂ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಕುರಿತು ಪ್ರಶ್ನಿಸಿದಾಗ, ಯಾವುದೇ ಕಾರಣಕ್ಕೂ ಅಕ್ರಮ ಮರಳುಗಾರಿಕೆ, ಅಕ್ರಮ ಕ್ವಾರಿ ನಡೆಸಲು ಅವಕಾಶ ನೀಡುವುದಿಲ್ಲ. ಯುವಕರು ಮಾದಕ ವ್ಯಸನಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವ ಕುರಿತು ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿ ಗಳು ತಮ್ಮೊಂದಿಗೆ ಚರ್ಚಿಸಿದ್ದಾರೆ. ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಿವಮೊಗ್ಗದಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ಸಾಕಷ್ಟು ದೂರುಗಳಿವೆ. ಸ್ಮಾರ್ಟ್ ಸಿಟಿ ಕಾಮಗಾರಿಯೂ ಕೆಲವೆಡೆ ಅವೈಜ್ಞಾನಿಕವಾಗಿದೆ ಎಂಬ ದೂರುಗಳಿವೆ ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವೆ ಎಂದರಲ್ಲದೆ, ಸಾರ್ವಜನಿಕ ಆಸ್ತಿ ಕಬಳಿಕೆ ಬಗ್ಗೆ ಮಾದ್ಯಮದವರು ಗಮನ ಸೆಳೆದಾಗ, ಹಂತಹಂತವಾಗಿ ಎಲ್ಲವನ್ನೂ ನಿಯಂತ್ರಣ ಮಾಡುವ ಅಗತ್ಯವಿದೆ ಈ ನೆಲೆಯಲ್ಲಿ ಸಾರ್ವಜನಿಕರ ಸಹಕಾರವನ್ನೂ ನಾನು ನಿರೀಕ್ಷೆ ಮಾಡುವೆ ಎಂದು ಹೇಳಿದರು.

ಎಂಪಿಎಂ ಬಗ್ಗೆ ಅಧ್ಯಯನ
ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಎಂ.ಪಿ.ಎಂ ಕಾರ್ಖಾನೆಯ ಎಂ.ಡಿ.ಯಾಗಿ ಸರಕಾರ ನೇಮಕ ಮಾಡಿದ್ದು, ಕಾರ್ಖಾನೆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಪಡೆಯುತ್ತೇನೆ. ಕಾರ್ಮಿಕರ ಸಮಸ್ಯೆ ಮತ್ತು ಕಾರ್ಖಾನೆಯನ್ನು ಆರಂಭಿಸುವ ಕುರಿತು. ಅಲ್ಲಿನ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಳ್ಳುವೆ. ಮೊದಲಿಗೆ ಅಲ್ಲಿನ ಪೂರ್ಣ ವ್ಯವಸ್ಥೆಯ ಅಧ್ಯಯನ ಆಗಬೇಕಿದೆ. ಶಿವಮೊಗ್ಗದ ಆರ್ಥಿಕ ಶಕ್ತಿಯಾದ ಕಾರ್ಖಾನೆ ಸಶಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಚಿಂತನೆ ಮಾಡಬೇಕಿದೆ ಎಂದು ಡಾ.ಸೆಲ್ವಮಣಿ ಅಭಿಪ್ರಾಯಪಟ್ಟರು.ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಮಾದ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ,ಗಜೇಂದ್ರ ಸ್ವಾಮಿ, ಪದ್ಮನಾಭ್ ಜಿ ಇದ್ದರು..

ಸಾರ್ವಜನಿಕರು ಕಚೇರಿ ವೇಳೆಯಲ್ಲಿ ಯಾವಾಗ ಬೇಕಾದರೂ ತಮ್ಮನ್ನು ಭೇಟಿಯಾಗ ಬಹುದು ಎಂದ ಅವರು, ಸಾರ್ವಜನಿಕರ ಭೇಟಿಗೆ ಯಾವುದೇ ಸಮಯ ನಿಗದಿಪಡಿಸುವುದಿಲ್ಲ ಕಚೇರಿಯಲ್ಲಿ ಇದ್ದಾಗ. ಸಾರ್ವಜನಿಕರು ತಮ್ಮನ್ನು ಭೇಟಿಯಾಗಿ ಅಹವಾಲು ಸಲ್ಲಿಸಬಹುದು.

ಡಾ.ಸೆಲ್ವಮಣಿ

Ad Widget

Related posts

ಅರಣ್ಯಇಲಾಖೆಯ ಪಾತ್ರ ತುಂಬಾ ಮುಖ್ಯ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ

Malenadu Mirror Desk

ಜಿಲ್ಲೆಯಲ್ಲಿ ಬಿಗಿ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ

Malenadu Mirror Desk

ಶರಾವತಿ ಹಿನ್ನೀರು ಹಬ್ಬ, ನೃತ್ಯ, ಆಹಾರ ಮೇಳದ ಆಕರ್ಷಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.