ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಭಾರತಿ ನಾಗರಾಜ್, ಉಪಾಧ್ಯಕ್ಷರಾಗಿ ಎಸ್.ಆರ್.ಗಿರೀಶ್ ಅವಿರೋದವಾಗಿ ಆಯ್ಕೆಯಾದರು.
ಶನಿವಾರ ನಡೆದ ಚುನಾವಣೆಯಲ್ಲಿ ಹಿರಿಯ ತೋಟಗಾರಿಕಾ ಅಧಿಕಾರಿ ವಿಶ್ವನಾಥ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿದರು. ೯ ಮಂದಿ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಗೆ ಡಿ.೨೭ ರಂದು ಚುನಾವಣೆ ನಡೆದಿತ್ತು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಭಾರತಿ ನಾಗರಾಜ್ ಮತ್ತು ಗಿರೀಶ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ಪುರದಾಳು ಗ್ರಾಮದಿಂದ ಮೂರನೇ ಭಾರಿ ಆಯ್ಕೆಯಾಗಿರುವ ಭಾರತಿ ಅವರು ಮೂರನೇ ಬಾರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಗುಡ್ಡದ ಅರಕೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಗಿರೀಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಗಿರೀಶ್ ಎರಡನೇ ಬಾರಿ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ್ರಮುಖರಾದ ಹೆಬ್ಬೂರು ನಾಗರಾಜ್, ದತ್ತರಾಜ್, ಕೃಷ್ಣಪ್ಪ, ಪ್ರದೀಪ್ ಹೆಬ್ಬೂರು, ಗೋವಿಂದಪ್ಪ, ವಿಶ್ವನಾಥ್, ಶಾಂತರಾಜ್, ಮಂಜಪ್ಪನಾಯ್ಕ, ಜಗದೀಶ್ ಹಾಡಿಕೇವಿ, ಕೊಲ್ಲಪ್ಪ ಮತ್ತಿತರರು ಹಾಜರಿದ್ದರು.