Malenadu Mitra
ರಾಜ್ಯ ಶಿವಮೊಗ್ಗ ಹೊಸನಗರ

ಮಾಚಿದೇವ ಸರ್ವಕಾಲಕ್ಕೂ ಆದರ್ಶಪ್ರಾಯರು: ಸುಧಾಕರ್

ಸರ್ವರಿಗೂ ಸಮಪಾಲು ಎಂದು ಸಾಮಾಜಿಕ ಕ್ರಾಂತಿ ಎಬ್ಬಿಸಿದವರು ಮಡಿವಾಳ ಮಾಚಿದೇವರು ಎಂದು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷರಾದ ಎಂ.ಎನ್ ಸುಧಾಕರ್ ಹೇಳಿದರು.
ಹೊಸನಗರ ತಾಲ್ಲೂಕು ಆಡಳಿತವು ತಾಲ್ಲೂಕು ಕಛೇರಿಯ ಆವರಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ವಶ್ಯತೆ, ಮೂಡನಂಬಿಕೆಗಳ ವಿರುದ್ಧ ಹೋರಾಟ ಮಾಡಿದ ಸತ್ಪುರುಷ ಮಾಚಿದೇವ, ಸರ್ವಕಾಲಕ್ಕೂ ಆದರ್ಶಪ್ರಾಯರು.
೧೨ನೇ ಶತಮಾನದಲ್ಲಿಯೇ ಅನೇಕ ನಿಷ್ಠುರವಾದ ನಿಲುವುಗಳನ್ನು ಮಂಡಿಸಿದವರು ಸಮಾಜದ ಸುಧಾರಣೆ ಹಾಗೂ ಜಾತಿಯತೇಯ ವಿರುದ್ಧ ಹೋರಾಟ ನಡೆಸಿದವರು ಇಂಥವರು ಹಿಂದೆ ಇದ್ದ ಕಾರಣ ಇಂದು ನಾವು ನೀವೆಲ್ಲರೂ ಒಟ್ಟಿಗೆ ಬಾಳಲು ಸಾಧ್ಯವಾಗಿದೆ ಎಂದು ಸುಧಾಕರ್ ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ರಾಕೇಶ್‌ರವರು ವಹಿಸಿ ಮಾತನಾಡಿ, ೧೨ನೇ ಶತಮಾನದಲ್ಲಿ ಇದ್ದ ಸಾಮಾಜಿಕ ಪಿಡುಗು ಇಂದಿಗೂ ಅಲ್ಲ ಅಲ್ಲಲ್ಲಿ ಕಾಣುತ್ತಿವೆ ಅದನ್ನು ಸಂಪೂರ್ಣ ಹೋಗಲಾಡಿಸಬೇಕಿದೆ ಎಂದರು.
ಶಿರಸ್ತೇದಾರ್ ಶ್ರೀಕಾಂತ್ ಹೆಗ್ಡೆ, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ಮಂಜುಳಾ, ಚಾಂದಿನಿ, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ ಕರ್ನಾಟಕ ಬ್ಯಾಂಕ್ ನಿವೃತ್ತ ಗುಮಾಸ್ಥರಾದ ಬಿ.ಎಂ ಶ್ರೀಧರ, ಎಂ.ಎನ್ ಕೃಷ್ಣಮೂರ್ತಿ, ನಾಗರಾಜ್ ಕಿಣಿ, ನಾಗಪ್ಪ, ಶಿವಪ್ಪ, ಬಚ್ಚಪ್ಪ, ಧರ್ಮರಾಜ್, ಕಲ್ಲೂರು ವೀರಪ್ಪ, ಎಂಗುಡ್ಡೆಕೊಪ್ಪ ರವಿ ಮತ್ತಿತರರಿದ್ದರು

Ad Widget

Related posts

ಬಿಎಸ್‌ವೈ ಬಜೆಟ್: ಮಲೆನಾಡಿನ ನಿರೀಕ್ಷೆಗಳು

Malenadu Mirror Desk

ಶಿವಮೊಗ್ಗ ಜಿಲ್ಲೆಯಲ್ಲಿ ಯಾರಿಗೊಲಿಯಲಿದೆ ಸಚಿವಗಾದಿ?, ಸಂಗಮೇಶ್, ಮಧು ಬಂಗಾರಪ್ಪ, ಬೇಳೂರು ಮೂವರೂ ಆಕಾಂಕ್ಷಿಗಳು

Malenadu Mirror Desk

ಕಾನೂನು ಸುವ್ಯವಸ್ಥೆ ಸರಿದಾರಿಯಲ್ಲಿದೆ: ಸಿಎಂ ಬೊಮ್ಮಾಯಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.