ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಕೊರೊನ ಸೋಂಕಿನಿಂದಾಗಿ ಮೂರು ಮಂದಿ ನಿಧನರಾಗಿದ್ದಾರೆ. ಈವರೆಗೆ ಒಟ್ಟಾರೆ ಕೊರೊನ ಪ್ರಕರಣಗಳು ಇಳಿಮುಖವಾಗಿದ್ದರೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಶುಕ್ರವಾರ 280 ಮಂದಿಗೆ ಸೋಂಕು ತಗುಲಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 2342 ಸಕ್ರಿಯ ಪ್ರಕರಣಗಳಿವೆ. ಶಿವಮೊಗ್ಗ ತಾಲೂಕಿನಲ್ಲಿ೯೬, ಭದ್ರಾವತಿ 53, ತೀರ್ಥಹಳ್ಳಿ 31 ಶಿಕಾರಿಪುರ 30, ಸಾಗರ22,,ಹೊಸನಗರ10 ,ಸೊರಬ 36 ಹಾಗೂ ಇತರೆ ಜಿಲ್ಲೆಗಳ ಇಬ್ಬರಲ್ಲಿ ಸೋಂಕು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.