Malenadu Mitra
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ತೂದೂರು – ಮುಂಡುವಳ್ಳಿ ನೂತನ ಸೇತುವೆಗೆ ಮುಖ್ಯಮಂತ್ರಿ ಒಪ್ಪಿಗೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ತಮ್ಮ ಮತಕ್ಷೇತ್ರದ ನಾಯಕರ ನಿಯೋಗದೊಂದಿಗೆ,  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ತೀರ್ಥಹಳ್ಳಿ ತಾಲೂಕಿನ  ಧೀರ್ಘ ಕಾಲದ ಬೇಡಿಕೆಯಾದ ತೂದೂರು – ಮುಂಡುವಳ್ಳಿ ನಡುವೆ, ತುಂಗಾ ನದಿಗೆ ಅಡ್ಡಲಾಗಿ ಸುಮಾರು ರೂಪಾಯಿ  20 ಕೋಟಿ ಅಂದಾಜು ವೆಚ್ಚದ ನೂತನ ಸೇತುವೆ ನಿರ್ಮಾಣ   ಕಾಮಗಾರಿಯ, ಯೋಜನೆಗೆ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕಾರ್ಯಗತ ಗಳಿಸಲು, ಮನವಿ ಸಲ್ಲಿಸಿದರು.
ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ನೂತನ ಸೇತುವೆ ನಿರ್ಮಾಣ ಕಾಮಗಾರಿಯ ಯೋಜನೆಯನ್ನು ಆದ್ಯತೆಯ  ಮೇಲೆ ಕೈಗೊಳ್ಳಲು, ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.
ನೂತನ ಸೇತುವೆ ನಿರ್ಮಾಣ ಕಾಮಗಾರಿ ಅನುಷ್ಟಾನಗೊಂಡರೆ, ಸುಮಾರು ಏಳರಿಂದ ಎಂಟು ಗ್ರಾಮ ಪಂಚಾಯತ್ ಗಳಿಗೆ ಸಂಪರ್ಕ ಸಾಧಿಸಲು ಅನುಕೂಲ ವಾಗುತ್ತದೆ. ಪ್ರವಾಸಿ ಮತ್ತು ಯಾತ್ರಾ ಸ್ಥಳ ಗಳಾದ ಕುಪ್ಪಳ್ಳಿ, ಮೃಗವಧೆ, ಚಿಬ್ಬಲಗುಡ್ಡೆ, ಶೃಂಗೇರಿ, ಹೊರನಾಡು ಹಾಗೂ ಎನ್ ಆರ್ ಪುರ ಮುಂತಾದ ಪ್ರದೇಶಗಳಿಗೆ, ಸಮೀಪದ ಮಾರ್ಗವಾಗುತ್ತದೆ.
ಮಾಳುರು ಶಾಲೆ ಕಾಲೇಜುಗೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೂ ಅನುಕೂಲ ವಾಗುತ್ತದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ಮುಖ್ಯಮಂತ್ರಿ ಯವರಿಗೆ ಮನವರಿಕೆ ಮಾಡಿದ್ದಾರೆ.
ನಿಯೋಗದಲ್ಲಿ ನವೀನ್ ಹೆದ್ದೂರು, ಸತೀಶ್ ಬೇಗುವಳ್ಳಿ, ಕವಿರಾಜ್,  ಕಾನುಕೊಪ್ಪ ಶಿವ ಕುಮಾರ್, ಮಧು ತೂದೂರು, ಯಶಸ್ವಿ  ಹಾಗೂ ಇತರರೂ ಉಪಸ್ಥಿತರಿದ್ದರು.

Ad Widget

Related posts

ಕೋವಿಡ್ ಮೂರನೇ ಅಲೆ : ಭೀತಿಪಡುವ ಅಗತ್ಯವಿಲ್ಲ

Malenadu Mirror Desk

ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಕೇಂದ್ರಗಳಲ್ಲಿಯೇ ಅರ್ಜಿ ಸಲ್ಲಿಸಿ: ಹೆಚ್.ಸಿ.ಯೋಗೇಶ್

Malenadu Mirror Desk

ಜನರ ಹಣ ಜನರಿಗೆ ಕೊಡುವ ಸಿದ್ಧಾಂತ ಕಾಂಗ್ರೆಸ್‌ದು, ಭರವಸೆ ಮಾತ್ರವಲ್ಲ, ಗ್ಯಾರಂಟಿ ಕಾರ್ಡ್ ಕೊಡುತ್ತೇವೆ: ಸುರ್ಜೇವಾಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.