Malenadu Mitra
ರಾಜ್ಯ ಶಿವಮೊಗ್ಗ

ಹರ್ಷ ಕೊಲೆ ಆರೋಪಿಗಳ ಹಿನ್ನೆಲೆ ಏನು , ಯಾರ ಪಾತ್ರ ಏನಿತ್ತು ಗೊತ್ತಾ ?

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಪೊಲೀಸರು ಈಗ ೭ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಆರೋಪಿಗಳ ಮೇಲೆ ಎಷ್ಟು ಪ್ರಕರಣಗಳಿವೆ, ಅವರ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ
A1-ಖಾಸಿಫ್: 32 ವರ್ಷದ ಖಾಸಿಫ್ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಖಾಸಿಫ್ ಗ್ಯಾಂಗ್ ಮತ್ತು ಹರ್ಷನ ಗ್ಯಾಂಗ್‌ಗೆ 2020ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಖಾಸಿಫ್ ಹುಡುಗರನ್ನ ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಕೊಲೆ ಮಾಡಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ.

ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ. ಖಾಸಿಫ್ ವಿರುದ್ಧ ದೊಡ್ಡಪೇಟೆ ಹಾಗೂ ತುಂಗಾ ನಗರ ಠಾಣೆ ಸೇರಿದಂತೆ ಇತರೆಡೆ ಕಳ್ಳತನ, ದೊಂಬಿ, ಹಲ್ಲೆ ಪ್ರಕರಣಗಳು, ಗಾಂಜಾ ಮಾರಾಟ ಸೇರಿದಂತೆ 17ಪ್ರಕರಣಗಳಿವೆ.

A2-ನದೀಮ್: 23ವರ್ಷದ ನದೀಮ್ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದೆ. ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನ ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.
A3- ಆಸಿಫ್ ಖಾನ್: 21ವರ್ಷದ ಆಸಿಫ್ ಕೊಲೆ ಮಾಡುವ ಉದ್ದೇಶದಿಂದ ಖಾಸಿಫ್‌ನ ಮಾತಿನಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಎರಡನೆಯವನಾಗಿದ್ದಾನೆ.
A4 -ರಿಯಾನ್ ಶರೀಫ್ ಅಲಿಯಾಸ್ ಖಾಸಿ :22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆಗೂ ಮೊದಲು ಖಾಸಿಫ್‌ನ ಪ್ಲ್ಯಾನಿಂಗ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ.
A5 -ನಿಹಾನ್ ಅಲಿಯಾಸ್ ಮುಜಾಹಿದ್: ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ. ವಯಸ್ಸು 23. ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಸ್ನೇಹಿತರ ಗ್ಯಾಂಗ್ ಜೊತೆ ಇದೇ ಕ್ಲಾರ್ಕ್ ಪೇಟೆಯಲ್ಲಿ ಮೀಟಿಂಗ್ ಮಾಡ್ತಿದ್ದ. ಖಾಸಿಫ್‌ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಈತನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ.
A6 -ಅಬ್ದುಲ್ ಅಪ್ನಾನ್: ಈತನ ವಯಸ್ಸು 21. ಕೊಲೆಯಲ್ಲಿ ನೇರವಾಗಿ ಅಲ್ಲದಿದ್ರೂ ಪರೋಕ್ಷವಾಗಿ ಭಾಗಿಯಾಗಿದ್ದ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನಾ ಇಲ್ವಾ. ಹೀಗೆ ಪ್ರತಿಯೊಂದು ಮಾಹಿತಿಯನ್ನ ಖಾಸಿಫ್‌ಗೆ ನೀಡ್ತಿದ್ದ. ಕೊಲೆ ಬಳಿಕ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ ಎಂದು ತಿಳಿದು ಬಂದಿದೆ.
A7 -ಜಿಲಾನ್: ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನ ಕಾರಿನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಸ್ವಿಫ್ಟ್ ಕಾರಿನಲ್ಲಿ ಭದ್ರಾವತಿ ಕಡೆ ತೆರಳಿದ್ದ. ಅಲ್ಲಿ ಎಲ್ಲರನ್ನೂ ಕರೆದೊಯ್ದು ಡೈವರ್ಟ್ ಮಾಡುವ ಕೆಲಸ ಮಾಡಿದ್ದ.

Ad Widget

Related posts

ಮಾತೋಶ್ರೀ ಅಂಗಡಿ ಭಸ್ಮ: ಸಚಿವರ ಭೇಟಿ

Malenadu Mirror Desk

ಜನಸಂಖ್ಯೆ ಆಧಾರದಲ್ಲಿ ಅನುದಾನ

Malenadu Mirror Desk

ರೈತ ವಿರೋಧಿ ಕಾಯಿದೆ ವಿರೋಧಿಸಿ ಏ.21 ಕ್ಕೆ ಬೆಂಗಳೂರಿನಲ್ಲಿ ರ್‍ಯಾಲಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.