ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಖಂಡಿಸಿ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರ ಬೆನ್ನಲ್ಲೆ ಹತ್ಯೆ ಆರೋಪದ ಮೇಲೆ ಶೀವಮೊಗ್ಗದ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ಇಲಿಯಾಸ್ ನಗರದ ಫರಾಜ್ ಪಾಶಾ(24) ಮತ್ತು ವಾದಿ-ಎ-ಹುದಾ ಬಡಾವಣೆಯಲ್ಲಿ ಅಬ್ದುಲ್ ಖಾದರ್ ಜಿಲಾನ್(25) ಬಂಧಿತ ಆರೋಪಿಗಳಾಗಿದ್ದಾರೆ. ಇವಲ್ಲಿ ಜಿಲಾನ್ ವಾಹನ ಚಾಲಕನಾಗಿ ಕಾರ್ಯನಿರ್ವಹಿಸಿದರೆ, ಫರಾಜ್ ಮಾಹಿತಿದಾರನಾಗಿ ಕೆಲಸ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬುಧವಾರ ಈ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ನ್ಯಾಯಾಂಗ ಬಂಧನ:
ಮಂಗಳವಾರ ಬಂಧಿಸಿದ್ದ ಎಲ್ಲಾ ೬ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲರಿಗೂ ನ್ಯಾಯಾಲಯು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ನಡುವೆ ಹರ್ಷನ ಮೊಬೈಲ್ ವಿಡಿಯೊ ಕಾಲ್ ಮಾಡಿದ ಹುಡುಗಿಯರು ಯಾರು ಎಂಬ ಬಗ್ಗೆ ಇಲಾಖೆ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಹರ್ಷನ ಬಳಿಯಿದ್ದ ಮೊಬೈಲ್ ಕೂಡಾ ನಾಪತ್ತೆಯಾಗಿದ್ದು, ಆರೋಪಿಗಳೇ ಅದನ್ನು ಕಿತ್ತುಕೊಂಡಿರಬಹುದಾ ಎಂಬ ಶಂಕೆಯೂ ಪೊಲೀಸರಿಗಿದೆ.