ಅಡಕೆ ತೋಟಕ್ಕೆ ಅಡಕಾಸಿ ಪರಿಹಾರ ನಿಗದಿ: ನೊಂದ ರೈತ ಆತ್ಮಹತ್ಯೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಮೊದಲ ಬಲಿ
ಕಷ್ಟಪಟ್ಟು ತೋಟ ಮಾಡಿದ್ದರು ಫಸಲು ಬಂದು ಬಡತನ ನೀಗೀತು ಎಂದು ಆ ಕುಟುಂಬ ಕನಸು ಕಾಣುತಿತ್ತು ಆದರೆ ಹಾಗಾಗಲಿಲ್ಲ. ನೂತನ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ವ್ಯಾಪ್ತಿಗೆ ತೋಟ ಬಂದಿತ್ತು. ಮಾರುಕಟ್ಟೆಯಲ್ಲಿ ಎಕರೆಗೆ ೨೫-೩೦...