ಸಿಗಂದೂರು ಚೌಡಮ್ಮ ದೇವಿ ಜಾತ್ರೆ ಆರಂಭ, ಭಕ್ತಿಪರವಶರಾದ ಭಕ್ತರು
ಹರಿದು ಬಂದ ಭಕ್ತಸಾಗರ, ಜನಮನಗೆದ್ದ ಜಾನಪದ ಕಲಾತಂಡಗಳು
ಸಿಗಂದೂರು,ಜ.೧೪: ನಾಡಿನ ಪ್ರಸಿದ್ಧ ಶಕ್ತಿಕೇಂದ್ರವಾದ ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮದೇವಿ ದೇವಾಲಯದಲ್ಲಿ ಎರಡು ದಿನಗಳ ಸಂಕ್ರಾಂತಿ ಜಾತ್ರೆಯು ವಿಜೃಂಬಣೆಯಿಂದ ಆರಂಭವಾಯಿತು. ಶನಿವಾರ ದೇವಿಯ ಮೂಲಸ್ಥಳವಾದ ಸೀಗೆ ಕಣಿವೆಯಲ್ಲಿ ವಿವಿಧ ಪೂಜೆ, ಹೋಮಗಳನ್ನು ನೆರವೇರಿಸಲಾಯಿತು.ಕಳೆದೆರಡು ವರ್ಷಗಳಿಂದ...