ಮಾನವನಾಗುವುದು ಎಂದರೆ…
ಏನಾದರೂ ಆಗು ಮೊದಲು ಮಾನವನಾಗು ಅನ್ನುವುದು’ ಸಿದ್ದಯ್ಯಪುರಾಣಿಕರ ಸಾಲು. ಮಾನವನಾಗುವುದು ಅಂದರೆ ಏನು? ಇದು ಬಹುಮುಖ್ಯ ಪ್ರಶ್ನೆ. ಎಲ್ಲಾ ಪ್ರಾಣಿಪಕ್ಷಿಗಳಿಗೂ ಅಥವಾ ಸೃಷ್ಟಿಯ ಜೀವಿಗಳಿಗೆಲ್ಲಾ ಕೆಲವು ನಿರ್ದಿಷ್ಟ ಲಕ್ಷಣಗಳಿರುವಂತೆಯೇ ಮನುಷ್ಯನಿಗೂ ಇವೆ. ಮಾತಾಡುವುದು, ಆಲೋಚಿಸುವುದು,...