ಭಾವುಕ ಲೋಕ ಸೃಷ್ಟಿಮಾಡಿದ್ದ ಗುರುವಂದನೆ, ಶಿಷ್ಯವೃಂದದ ಗೌರವ ಸ್ವೀಕರಿಸಿ ಪುನೀತರಾದ ಗುರುಗಳು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಹೃದಯ ಸ್ಪರ್ಶಿ ಕಾರ್ಯಕ್ರಮ
¨ಅಲ್ಲೊಂದು ಭಾವುಕ ಲೋಕ ಸೃಷ್ಟಿಯಾಗಿತ್ತು, ಎಲ್ಲರ ಮುಖದಲ್ಲಿಯೂ ಒಂದು ಧನ್ಯತಾಭಾವ, ೨೭ ವರ್ಷಗಳ ನಂತರ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾದ ಮಧುರ ಕ್ಷಣ, ಎಷ್ಟೋ ವರ್ಷಗಳ ಬಳಿಕ ಸಹೋದ್ಯೋಗಿಗಳ ಭೇಟಿ. ಕಲಿಯುವಾಗ ತರಲೆಯಾಗಿದ್ದ ಶಿಷ್ಯರ ವಿನೀತ...