ಹಾಡುವ ಹುಡುಗಿಯ ಕರೆದುಕೊಂಡ ಕ್ರೂರ ವಿಧಿ, ಕರೂರು ಸೀಮೆಯ ಗಾನಕೋಗಿಲೆ ಶ್ರೀಲಕ್ಷ್ಮಿ ಸಾವು
ಆ ಹುಡುಗಿ ಹಾಡುತ್ತಿದ್ದರೆ ಶರಾವತಿ ನದಿಯಲ್ಲಿ ಅಲೆಗಳೇಳುತ್ತಿದ್ದವು, ನೆಲದ ಸಂಸ್ಕøತಿಯ ತಾಯಿಮನೆಯಂತಿರುವ ಕರೂರು ಸೀಮೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಆಕೆಯ ಅದ್ಭುತ ಗಾನಸಿರಿಗೆ ಕೇಳುಗರು ತಲೆದೂಗುತ್ತಿದ್ದರು. ಬಡತನದಲ್ಲಿಯೇ ಅರಳಿದ ಅಗಾಧ ಪ್ರತಿಭೆ ಬೆಳಗುವುದು ಕ್ರೂರ ವಿಧಿಗೆ...