ಶಿವಮೊಗ್ಗ, ಡಿ.೮: ರೈತ ಪರ ಮಸೂದೆ ಗಳನ್ನು ಕೆಲವು ದಳ್ಳಾಳಿಗಳು, ಮಧ್ಯವರ್ತಿ ಗಳು ಮತ್ತು ರಾಜಕೀಯ ಹಿತಾಸಕ್ತಿಗಳು ಸೇರಿಕೊಂಡು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿವೆ. ಇದೊಂದು ರಾಜಕೀಯ ಕುತಂತ್ರವಾಗಿದ್ದು, ರೈತರನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಗತಿಪರರು, ಎಡಪಂಥಿಯರು ಮಾತ್ರ ಇಂತಹ ಮಸೂದೆಗಳನ್ನು ಒಪ್ಪುತ್ತಿಲ್ಲ. ಇವರ್ಯಾ ರಿಗೂ ಕೃಷಿ ಕ್ಷೇತ್ರದ ಅಭಿವೃದ್ದಿ ಹಿಡಿಸು ವುದಿಲ್ಲ. ಸುಮ್ಮನೆ ಅಪಪ್ರಚಾರ ಮಾಡು ತ್ತಿದ್ದಾರೆ ಎಂದು ಹೇಳಿದರು.
ಬೆಲೆಯಲ್ಲಿ ರೈತರ ಬೆಳೆಯನ್ನು ಖರೀದಿ ಮಾಡುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಕಾಯ್ದೆ ಗಳಲ್ಲೂ ಸ್ಪಷ್ಟತೆ ಇದೆ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಕೇರಳ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ರೈತರ ಮತ್ತು ಕೃಷಿ ಸುಧಾರಣೆಗಾಗಿಯೇ ರೈತ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಿಂದ ರೈತರಿಗೆ ಅನುಕೂಲ ವಾಗುತ್ತದೆಯೇ ಹೊರತು ಯಾವುದೇ ಅನಾನುಕೂಲ ಆಗುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಗಿರೀಶ್ ಪಟೇಲ್, ಡಿ.ಎಸ್. ಅರುಣ್, ಸಾಲೇಕೊಪ್ಪ ರಾಮ ಚಂದ್ರ, ರಾಮು, ಗಂಗಾಧರ್, ಶಿವರಾಜ್, ಪ್ರಸನ್ನ, ಕೃಷ್ಣೋಜಿರಾವ್,ಸತೀಶ್, ಸುನಿತಾ ಅಣ್ಣಪ್ಪ ಸೇರಿದಂತೆ ಹಲವರಿದ್ದರು.
previous post
next post