ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ರಚಿಸಿರುವ ಸಲಹಾ ಸಮಿತಿ ರದ್ದುಮಾಡುವಂತೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದಿAದ ಶುಕ್ರವಾರ ಹೊಸನಗರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಕೂಡಲೇ ಸಮಿತಿ ರದ್ದು ಮಾಡಬೇಕು. ಟ್ರಸ್ಟ್ ಅಡಿಯಲ್ಲಿ ಹಿಂದಿನAತೆ ದೇವಾಲಯದ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಸರಕಾರ ಇದೇ ರೀತಿ ನಿರ್ಲಕ್ಷö್ಯ ಧೋರಣೆ ತಾಳಿದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು. ಇದೇ ಸಂದರ್ಭದಲ್ಲಿ ಈಡಿಗ ಪ್ರಾಧಿಕಾರ ರಚನೆ ಮಾಡಿ ೫೦೦ ಕೋಟಿ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಂಘಟನೆ ಜಿಲ್ಲಾಧ್ಯಕ್ಷ ಪ್ರವೀಣ ಹಿರೇಗೋಡು, ಹೊಸನಗರ ತಾಲೂಕು ಅಧ್ಯಕ್ಷ ಉಮೇಶ್ ಹೆಚ್. ಹುಣಸವಳ್ಳಿ, ಗುರುಮೂರ್ತಿ ಮಂಡಾನೆ, ಪ್ರಶಾಂತ್ ಎನ್, ಗಣೇಶ್, ಗಂಗಾಧರ ಎಂ ಗುಡ್ಡೆಕೊಪ್ಪ ಮತ್ತಿತರರು ಹಾಜರಿದ್ದರು.
previous post
next post