ತಾವು ಕುಳಿತಿದ್ದ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದಕ್ಕೆ ಭಯಬಿದ್ದ ಇಬ್ಬರು ಹುಡುಗಿಯರು ಹಾಗೂ ಒಬ್ಬ ಹುಡುಗ ಬಸ್ ಚಲಿಸುತ್ತಿದ್ದಾಗಲೇ ಹೊರಕ್ಕೆ ಜಿಗಿದು ಗಾಯಗೊಂಡಿದ್ದಾರೆ.
ಸಾಗರದಿಂದ ಕಾರ್ಗಲ್‌ಗೆ ಬಸ್ ಹೋಗುತ್ತಿದ್ದಾಗ ಬಸ್‌ನಲ್ಲಿ ಕುಳಿತಿದ್ದ ಕಾರ್ಗಲ್‌ನ ಶಿಲ್ಪಾ, ಹುಣಸೂರಿನ ಮಧುರಾ ಹಾಗೂ ಯುವಕನೊಬ್ಬ ಜಿಗಿದಿದ್ದಾರೆ. ತೀವ್ರ ಗಾಯಗೊಂಡ ಮೂವರನ್ನೂ ಸ್ಥಳೀರಾದ ಜಾವೇದ್ ತಮ್ಮ ಟಾಟಾ ಏಸ್ ವಾಹನದಲ್ಲಿ ಕರೆತಂದು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಚಲಿಸುತ್ತಿದ್ದ ಬಸ್‌ನಿಂದ ಈ ಮೂವರೂ ಕೆಳಗೆ ಹಾರಲು ಬಸ್‌ಗೆ ಬೆಂಕಿಬಿದ್ದಿರುವುದು ಕಾರಣವಲ್ಲ. ಬಸ್‌ನಲ್ಲಿದ್ದ ಅಗ್ನಿನಿರೋಧಕ ಸಿಲಿಂಡರ್ ಲೀಕ್ ಆಗಿ ಅದರಿಂದ ಗ್ಯಾಸ್ ಬಂದಿದ್ದೇ ಈ ಪ್ರಯಾಣಿಕರು ಆತಂಕಗೊಳ್ಳಲು ಕಾರಣ ಎನ್ನಲಾಗಿದೆ. ಸಿಲಿಂಡರ್ ನಿಂದ ಬಂದ ಹೊಗೆ ಬೆಂಕಿಹೊತ್ತಿರುವುದಕ್ಕೆ ಬರುತ್ತಿದೆ ಎಂದು ಭಾವಿಸಿ ಅವಸರಕ್ಕೆ ಬಿದ್ದ ಮೂವರು ಜಿಗಿದು ಈಗ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
previous post
next post