Malenadu Mitra
ರಾಜ್ಯ ಸಾಹಿತ್ಯ

ಗೆಳೆಯನೆಂಬ ಪಥಿಕನಜೊತೆ ಪಥವನರಸಿ…

ಆದಿ ಮಾನವನಾಗಿದ್ದ ಮನುಷ್ಯಕಾಲದ ಓಟದೊಂದಿಗೆ ಪಯಣಿಸುತ್ತಲೆ ಪರಿಸರದಜೊತೆಗೆ ಮುಖಾಮುಖಿಯಾಗುತ್ತಾನೆ. ಹಾಗೆ ಮುಖಾಮುಖಿಯಾಗುತ್ತಲೆ ಸಂವಾದ ಮತ್ತು ವೈರುಧ್ಯದ ನೆಲೆಗಳನ್ನು ರೂಪಿಸಿಕೊಂಡದ್ದು ಈಗ ಚರಿತ್ರೆಯಾಗಿದೆ. ಅಂತಹ ಚರಿತ್ರೆಗಳನ್ನು ಓದುತ್ತಲೆ ನಮ್ಮ ಹೊಸ ಬದುಕಿಗೆ ಮುನ್ನುಡಿ ಬರೆಯುತ್ತಿರುತ್ತೇವೆ.
ನಾವು ಬಾಲ್ಯದಲ್ಲಿದ್ದಾಗ ಅನುಭವಿಸಿದ ರೋಮಾಂಚನಕಾರಿ ಆಟವನ್ನು ನೀವು ಒಮ್ಮೆ ನೆನಪು ಮಾಡಿಕೊಳ್ಳಿ. ಒಣ ಮಣ್ಣಿನೊಳಗೆ ಸಣ್ಣ ಗುಂಡಿಗಳನ್ನು ಮಾಡಿ ಗುಬ್ಬಿ ಎಂಬ ಹುಳಗಳು ಮನೆ ಮಾಡಿಕೊಂಡು ಬದುಕುತ್ತಿದ್ದವು. ಅವುಗಳಲ್ಲಿ ಒಂದನ್ನು ಹಿಡಿದುಕೊಂಡು ನಮ್ಮ ಅಂಗೈಯ ಮೇಲೆ ಇಟ್ಟುಕೊಂಡು “ಅಜ್ಜಿ ಮನೆಗೆ ಹೋಗುವ ದಾರಿಯಾವುದು ,ತೋರ್ಸು, ತೋರ್ಸು“ಅಂತ ಹೇಳುತ್ತಿದ್ದೆವು. ಆ ಹುಳ ಯಾವಕಡೆ ಹೋಗುತ್ತದೆಯೋ ಆ ಕಡೆ ನಾವು ಹೋಗುತ್ತಿದ್ದೆವು.ಅಜ್ಜಿಮನೆಗ ಹೋಗುವ ಸಂತಸವನ್ನುಅನುಭವಿಸುತ್ತಿದ್ದೆವು.
ಅಜ್ಜಿ ಮನೆ ಎಂಬುದು ನಮ್ಮ ಭಾವಕೋಶದೊಳಗೆ ನರುಗಂಪಿನ ಪರಿಮಳ. ಅಗೆದಷ್ಟು , ಮೊಗೆದಷ್ಟು ಸಿಗುತ್ತಲೆ ಹೋಗುವ ಅಂತರ್‍ದ್ರವ್ಯ. ಆದರೆ ಇಂದು ಅಜ್ಜಿಯೂ ಇಲ್ಲ, ಇದ್ದರೂ ನಾವು ಹೋಗುವುದಿಲ್ಲ. ಹೋದರೂ ಸ್ವಚ್ಛಂಧವಾಗಿ ವಿಹರಿಸಲಾಗದ ಕಟ್ಟುಪಾಡುಗಳು, ಜೊತೆಗೆ ಬದಲಾದಅಜ್ಜಿ ಮನೆಯ ಚಹರೆಗಳು .ಇಂತಹಕಾಲದಲ್ಲಿ ನಾವಿದ್ದೇವೆ. ನಮ್ಮ ಮನೆಯ ಬಳಿಯೇ ನಿಂತು ನಮ್ಮ ವಿಳಾಸವನ್ನು ಕೇಳುವ ವಿಚಿತ್ರ ಸಂದರ್ಭವಿದು.
ಇಡೀ ಭೂಮಂಡಲವನ್ನು ಗೆದ್ದು ಆಳಬಲ್ಲೆ ಎಂಬ ದುರಹಂಕಾರದಲ್ಲಿ, ಜಗತ್ತಿನ ಜೀವಜಾಲಕ್ಕೆ ಹಂತಕನಂತೆ ಬಾಳಿ ಬದುಕಿದ ಮನುಷ್ಯ ಯಕಶ್ಚಿತ್ ಒಂದುಕಾಣದೆ ಇರುವ ,ಒಂದು ತಲೆಕೂದಲನ್ನು ನೂರು ಬಾರಿ ಸೀಳಿದರೆ ಆಗುವಷ್ಟು ಸಣ್ಣದಿರುವ ವೈರಸ್ಸನ್ನು ಎದುರಿಸಲಾರದೆ ಹೇಡಿಯಂತೆ ಮೂರು ತಿಂಗಳು ಮುಸುಕೊದ್ದು ಮಲಗಿದ್ದುಕ್ಕೆ ಏನನ್ನಬೇಕು. ಅದನ್ನುಅಲ್ಲಮ ಕಂಗಳೊಳಗೆ ಕತ್ತಲೆ ಎನ್ನುತ್ತಾನೆ. ಬೆಳಕಲ್ಲಿದ್ದು ಕತ್ತಲೆಯಲಿದ್ದಂತೆ ಚಡಪಡಿಸುತ್ತಿರುವ ಮನುಷ್ಯಕುಲಕ್ಕೆ ಕತ್ತಲು ಬೆಳಕು ಎರಡರ ವ್ಯತ್ಯಾಸವೇಗೊತ್ತಿಲ್ಲದ ದಿವ್ಯ ವಿಸ್ಮøತಿಯಿದೆ.
ಪ್ರೊಮ್ಯೂತೀಸ್ ಎನ್ನುವ ಗ್ರೀಕ್ ವೀರನೊಬ್ಬ ಸ್ವರ್ಗದ ದೇವತೆಗಳಿಂದ ಅವರು ಮುಚ್ಚಿಟ್ಟುಕೊಂಡಿದ್ದ ಬೆಳಕನ್ನು ಕದ್ದುತಂದು ಭೂಮಿಗೆ ಜ್ಞಾನವನ್ನು, ಬೆಳಕನ್ನು ಅರಿವನ್ನು ತಂದುಬಿಡುತ್ತಾನೆ. ದೇವತೆಗಳು ಬೆಳಕನ್ನು ಭೂಮಿಗೆ ಕೊಡಬಾರದೆಂದು ಅವನನ್ನು ಬೆನ್ನಟ್ಟುತ್ತಾರೆ. ಆದರೆ ಅವನು ಬೂಮಿಗೆ ಬರುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆ ತಂದ ಬೆಳಕಿನ ಮಹತ್ವವನ್ನು ಗ್ರಹಿಸಲಾಗದ, ನಮ್ಮ ಪರಂಪರೆಯ ಬೇರುಗಳನ್ನು ಗುರುತಿಸಲಾಗದ, ನಮ್ಮ ಮೇಲಾಗಿರುವ ಗಾಯದ ಗುರುತುಗಳನ್ನು ಗಮನಿಸಲಾಗದ ವಿಚಿತ್ರ ವಿಸ್ಮøತಿಯ ಸಮುದಾಯವು ನಮ್ಮ ಎದುರಿಗಿದೆ.
ಜಾಗತೀಕರಣವೇ ಹಾಗೆ, ಜಗತ್ತನ್ನು ಗ್ರಾಮ್ಯವನ್ನಾಗಿಸುವಾಗ, ಪ್ರತಿಯೊಂದನ್ನು ಮಾರುಕಟ್ಟೆಯ ಸರಕನ್ನಾಗಿಸುತ್ತಿರುವಾಗ ಅದರ ಒಳಗೆ ಇರುವ ಮಾನವೀಯತೆಯ ಸೆಲೆಗಳು ಬತ್ತಿ ಹೋಗುತ್ತಿವೆ, ಸಂಬಂಧಗಳು ಶಿಥಿಗೊಂಡಿವೆ ಎಂಬುದನ್ನುಗುರುತಿಸಲಾಗದ ಭ್ರಮಾ ಲೋಕವನ್ನು ಸೃಷ್ಠಿಸಿಕೊಂಡಿವೆ. ಹಾಗಾಗಯೇ ಪ್ರತಿಯೊಂದರಲ್ಲೂ ವ್ಯಾಪಾರದ ಬುದ್ಧಿ,ಲಾಭ ಬಡುಕತನ ತಲೆದೋರಿದೆ.
ತಾಯಿಯ ಮೊಲೆ ಹಾಲು ಕೂಡಾ ವ್ಯಾಪಾರವಾಗುತ್ತದೆಯಾದರೆ ಹೊಸ ತಲೆಮಾರನ್ನು ಹೃದಯ ಸಂವಾದದಲ್ಲಿ ಹೇಗೆ ನಿರ್ಮಿಸಲು ಸಾಧ್ಯ?. ಇದು ನಮ್ಮೆದುಗಿರುವ ಪ್ರಶ್ನೆ.
ಹಸುವಿಗೆ ಹಾಲು ಕೊಟ್ಟು , ಶಿಸುವಿಗೆ ಬೆಣ್ಣೆಕೊಟ್ಟು.
ಬಿಸುಲೀಗೆ ಹೋಗರ್ನ ನೆರಳಿಗೆ ಕರೆದಾರೆ
ಅಸವಲ್ಲದ ಪುಣ್ಯ ಮಗನಿಗೆ.

ಎಂಬ ತ್ರಿಪದಿಯೊಂದು ನಮ್ಮಕಣ್ಣೆದುರಿಗಿದೆ.
ಹಾದಿಯಲಿ ಹೋಗುವ ಪಥಿಕನಿಗೆ ನಮ್ಮಕಡೆಯಿಂದ ಒಂದು ಪ್ರೀತಿಯ ಹಾರೈಕೆ. ಬಿರುಬಿಸಿಲಿನಲ್ಲಿ ಹೊಸ ದಾರಿಯನ್ನು ಸರಿ ಮಾಡಿಕೊಂಡು ಹೋಗುವ ಕನಸು ಹೊತ್ತ “ಮಲೆನಾಡು ಮಿರರ್’ ಎಂಬ ಪಥಿಕನಿಗೆ ರಣ ಬಿಸಿಲಿನಲಿ ್ಲಕುದ್ದು ಹೋಗದಂತೆ ನೆರಳಿಗೆ ಕರೆದು ಆ ದಾರಿಯಲ್ಲಿ ಯಶಸ್ವಿಯಾಗಿ ನಡೆಯುವ ಸಾಧ್ಯತೆಗಳನ್ನು ಕುರಿತು ಬೆಂಬಲಿಸಬೇಕಿದೆ. ಆಗ ಅಸವಲ್ಲದ ಪುಣ್ಯ ನಮಗೆ ಸಿಗಬಹುದು ಎಂಬುದು ಒಂದಾದರೂ ಗೆಳೆಯನೆಂಬ ಪಥಿಕನೊಬ್ಬನದಾರಿಗೆ ಜೊತೆಯಾದತೃಪ್ತಿ ಅಷ್ಟೆ.

ಡಾ.ಮೋಹನ್ ಚಂದ್ರಗುತ್ತಿ, ಸಹಾಯಕ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

Ad Widget

Related posts

ಆದ್ಯತಾ ವಲಯದ ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ

Malenadu Mirror Desk

ಎಲ್ಲ ಅರ್ಹರು ಬೂಸ್ಟರ್ ಡೋಸ್ ಪಡೆಯುವಂತೆ ಸಚಿವರ ಕರೆ

Malenadu Mirror Desk

ಶಿವಮೊಗ್ಗಮಹಿಳಾ ವಸತಿ ಪಾಲಿಟೆಕ್ನಿಕ್ ಅಭಿವೃದ್ಧಿಗೆ ನೆರವು: ಸಂಸದ ಬಿ.ವೈ.ರಾಘವೇಂದ್ರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.