Malenadu Mitra
ರಾಜ್ಯ ಶಿವಮೊಗ್ಗ

ಹೆದ್ದಾರಿ ಯೋಜನೆಗಳಿಗೆ ಗುದ್ದಲಿಪೂಜೆ

ಶಿವಮೊಗ್ಗ ಜನರ ಬಹುನಿರೀಕ್ಷಿತ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಇದೇ ಡಿಸಿಂಬರ್ ೧೯ ರಂದು ಕೇಂದ್ರ ಸಚಿವ ನಿತಿನ್‌ಗಡ್ಕರಿ ಚಾಲನೆ ನೀಡಲಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ೫೧೭ ಕೋಟಿ ರೂ.ಮೊತ್ತದ ಹೆದ್ದಾರಿ ಯೋಜನೆ, ೪೦ ಕೋಟಿ ರೂ. ಮೊತ್ತದ ರೈಲ್ವೆ ಮೇಲ್ಸೇತುವೆ, ೯೬ ಕೋಟಿ ವೆಚ್ಚದ ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ ದ್ವಿಪಥ ರಸ್ತೆ ಕಾಮಗಾರಿಗೆ ಸಚಿವರ್ ಆನ್‌ಲೈನ್ ಕಾರ್ಯಕ್ರಮದ ಮೂಲಕ ಚಾಲನೆ ನೀಡುವರು ಎಂದು ಅವರು ಹೇಳಿದರು.
ಇದಲ್ಲದೆ ೯ ಕೋಟಿ ವೆಚ್ಚದಲ್ಲಿ ಆಗುಂಬೆ ಸಮೀಪದಲ್ಲಿ ಮೂರು ಕಿರುಸೇತುವೆ.೧೬ ಕೋಟಿ ವೆಚ್ಚದಲ್ಲಿ ಹೊಸನಗರ-ನಿಟ್ಟೂರು ಹೆದ್ದಾಯಲ್ಲಿನ ಶಿಥಿಲಗೊಂಡ ಸೇತುವೆ ಕಾಮಗಾರಿಗಳಿಗೂ ಅಂದು ಚಾಲನೆ ನೀಡುವರು ಎಂದು ರಾಘವೇಂದ್ರ ತಿಳಿಸಿದರು.

Ad Widget

Related posts

ಮನೆ ಬಾಗಿಲಲ್ಲಿಯೇ ಕಂದಾಯ ಪಾವತಿ

Malenadu Mirror Desk

ಗಾಂಧಿ ಹೆಸರು ದುರುಪಯೋಗ : ಸಚಿವ ಕೆ.ಎಸ್. ಈಶ್ವರಪ್ಪ

Malenadu Mirror Desk

ಮಧು ಕಾಂಗ್ರೆಸ್‍ಗೆ ಬಂದ್ರೆ ನಾವ್ ಹೊರ ಹೋಗ್ತೇವೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.