ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿ, ನೌಕರರ ಸಂಗದ ಜಿಲ್ಲಾಧ್ಯಕ್ಷ ಮಾ.ಸ.ನಂಜುಂಡಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಆರೋಗ್ಯ ಇಲಾಖೆ ಎಲ್ಲಾ ನೌಕರರು ಕೊರೊನದಂತಹ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರಂತೆ ಉಳಿದ ನೌಕರರಿಗೂ ಸರಕಾರ ಸೂಕ್ತ ವೇತನ ಮತ್ತು ಭತ್ಯೆ ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ವಹಿಸಿದ್ದ ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಮಾತನಾಡಿ, ಆರೋಗ್ಯ ಇಲಾಖೆ ನೌಕರರ ಸಂಘ ಅತ್ಯಂತ ಕ್ರಿಯಾಶೀಲವಾಗಿದೆ. ನೌಕರರ ಪರ ಅನೇಕ ಕೆಲಸ ಕಾರ್ಯಕ್ರಮ ಮಾಡುತ್ತಿದೆ. ಇಲ್ಲಿ ಅಧಿಕಾರಿಗಳು ಮತ್ತು ನೌಕರರೆಂಬ ಬೇಧವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿ.ಪ್ರಭಾಕರ್, ವೈ.ಜೆ.ಶಶಿಕುಮಾರ್, ನಿಂಗರಾಜ್, ಮಲ್ಲಿಕಾರ್ಜುನ್, ವಿ.ಲಕ್ಷö್ಮಣ್, ಚಂದ್ರಮತಿ ಹೆಗ್ಡೆ ಮತ್ತಿತರರಿದ್ದರು. ಶ್ರೀಮತಿ ವಂದನಾ ಸ್ವಾಗತಿಸಿದರೆ, ಅನ್ನಪೂರ‍್ಣ ನಿರೂಪಿಸಿ, ಮಮತಾ ಎಲ್ಲರನ್ನೂ ವಂದಿಸಿದರು.
previous post
next post