ತೀರ್ಥಹಳ್ಳಿ ಹುಲಿ ಕಡಜಲು ಹುಳ ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ಮಂಡ ಗದ್ದೆ ಸಿಂಗನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಭವಿಸಿದೆ.ಕೀಗಡಿ ಜಯರಾಮ ಗೌಡರ ಪುತ್ರ ಅಖಿಲೇಶ್(39) ಹುಲಿ ಕಡಜಲು ಹುಳ(ಜೇನಿನ ಮಾದರಿ ಗೂಡು ಕಟ್ಟುವ ಹುಳು, ಬಂಡಾರ ಬಡ್ಕಿ ಅಂತಾನು ಅಂತಾರೆ) ಕಚ್ಚಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿದ್ದ ಅಖಿಲೇಶ್ ಕೊರನಾ ಹಿನ್ನೆಲೆ ಊರಿಗೆ ಮರಳಿದ್ದರು. ಭಾನುವಾರ ಮನೆಯಲ್ಲಿ ಕೊನೆ ತೆಗೆಯುವ ವೇಳೆ ತೋಟಕ್ಕೆ ಹೋಗಿದ್ದಾಗ ಹುಳಗಳು ಕಚ್ಚಿವೆ. ಸುಮಾರು 50 ಕ್ಕೂ ಹೆಚ್ಚು ಕಡ್ಜಿರಾ ಅಖಲೇಶ್ ರನ್ನ ಕಚ್ಚಿದೆ ಎಂದು ತಿಳಿದು ಬಂದಿದೆ.ಅಖಿಲೇಶ್ ಗೆ ಬಾಯಿಂದ ನೊರೆ ಬಂದಿದೆ. ಮೆಗ್ಗಾನ್ ಗೆ ಸಾಗಿಸುವ ವೇಳೆ ಅವರು ಸಾವನ್ನು ಕಂಡಿದ್ದು ತಂದೆಯ ಎದುರೇ ಈ ದುರಂತದ ಘಟನೆ ನಡೆದಿದೆ! ಅಖಿಲೇಶ್ ವಿವಾಹಿತರಾಗಿದ್ದು,ಪತ್ನಿ, 2 ತಿಂಗಳ ಪುಟ್ಟ ಮಗು ಇದೆ
previous post