Malenadu Mitra
ರಾಜ್ಯಶಿವಮೊಗ್ಗ

ಬಿಎಸ್‌ವೈ ಬಜೆಟ್: ಮಲೆನಾಡಿನ ನಿರೀಕ್ಷೆಗಳು

ಕೊರೊನ ಮಾರಕ ಪರಿಣಾಮದ ಹೊತ್ತಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮುಂದಿನ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದು, ಸಹಜವಾಗಿಯೇ ಮಲೆನಾಡಿನ ಜನ ಇಡಿಗಂಟು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದ ಇತರೆ ಭಾಗದ ಜನ ಶಿವಮೊಗ್ಗ ಸ್ವರ್ಗ ಆಗಿ ಹೋಗಿದೆ ಎಂಬ ಭಾವನೆಯಲ್ಲಿದ್ದಾರೆ. ಆದರೆ ಇಲ್ಲಿಯೂ ಭೂಮಿ ಸಮಸ್ಯೆ, ಉದ್ಯೋಗ, ಕೃಷಿ ಮಾರುಕಟ್ಟೆ, ಕೃಷಿ ಸಂಶೋಧನೆ, ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲವೂ ಇದೆ. ಹಾಗಾಗಿ ಬಹುಜನಕ್ಕೆ ಉಪಯೋಗವಾಗುವಂತಹ ಯೋಜನೆಗಳನ್ನು ಮಲೆನಾಡಿಗೆ ತರಲಿ ಎಂಬ ಆಸೆಗಣ್ಣುಗಳಿಗೇನು ಕೊರತೆ ಇಲ್ಲ
ಇತ್ತೀಚೆಗೆ ತವರಿನ ಜನರ ನಾಗರೀಕ ಸನ್ಮಾನ ಸ್ವೀಕರಿಸಿರುವ ಮುಖ್ಯಮಂತ್ರಿ ಮುಂದೆ ಬರುವವರು ಮಾಡಲಿಕ್ಕೆ ಕೆಲಸವೇ ಇರಬಾರದು ಆ ರೀತಿ ಶಿವಮೊಗ್ಗದ ಅಭಿವೃದ್ಧಿ ಮಾಡುವೆ ಎಂದು ಹೇಳಿರುವುದರಿಂದ ಇಲ್ಲಿನ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಮಲೆನಾಡಿಗೆ ಅನುಕೂಲಕರವಾದ ಹಲವು ಯೋಜನೆಗಳನ್ನು ಈಗಾಗಲೇ ತಂದಿದ್ದಾರೆ. ಆದರೂ ಆಡಳಿತಾತ್ಮಕವಾಗಿ ಆಗಬೇಕಾದ ಕೆಲಸಗಳ ಬಗ್ಗೆ ಜನರ ನಿರೀಕ್ಷೆ ಇದೆ.
ಕಂದಾಯ ವಿಭಾಗ:
ಶಿವಮೊಗ್ಗವನ್ನು ಕಂದಾಯ ವಿಭಾಗವನ್ನಾಗಿ ಮಾಡಬೇಕೆಂಬ ಬೇಡಿಕೆ ಇದೆ. ಚಿಕ್ಕಮಗಳೂರು, ದಾವಣಗೆರೆ, ಉಡುಪಿ, ಕಾರವಾರ ಹಾಗೂ ಹಾಸನ ಕೇಂದ್ರವಾಗಿಟ್ಟುಕೊಂಡು ಕಂದಾಯ ವಿಭಾಗ ಮಾಡಿದರೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ.
ಮೆಸ್ಕಾಂ ವಿಭಜಿಸಿ ಸೆಸ್ಕಾಂ ಮಾಡಬೇಕೆಂಬ ಬೇಡಿಕೆಯೂ ಇದೆ. ಶಿವಮೊಗ್ಗವನ್ನು ಪೊಲೀಸ್ ಕಮಿಷನರೇಟ್ ಮಾಡಬೇಕೆಂಬ ಇರಾದೆ ಜನರಲ್ಲಿದ್ದು, ಇದಕ್ಕೆ ಎಲ್ಲಾ ಅರ್ಹತೆಯನ್ನೂ ಮಲೆನಾಡು ಜಿಲ್ಲೆ ಹೊಂದಿದೆ. ಶಿವಮೊಗ್ಗದಲ್ಲಿ ಆಯುರ್ವೇದ ಯೂನಿವರ್ಸಿಟಿಗೆ ಈಗಾಗಲೇ ಭೂಮಿ ಮೀಸಲಿರಿಸಿದ್ದು, ಇದಕ್ಕೆ ಅನುದಾನದ ಬೇಕಾಗಿಗಿದೆ. ಪ್ರಸಕ್ತ ಬಜೆಟ್ ಹಣ ಮೀಸಲಿಡಬಹುದೇ ಎಂಬ ನಿರೀಕ್ಷೆಯಿದೆ.
ವೆಟರ್ನರಿ ವಿವಿ:
ಮಲೆನಾಡಿನಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆ ಮುಂಚೂಣಿಯಲ್ಲಿದ್ದು, ಯಥೇಚ್ಛವಾಗಿ ಹಾಲು ಉತ್ಪಾದನೆಯಾಗುತ್ತದೆ. ಇಲ್ಲಿಗೆ ಪಶುಸಂಗೋಪನೆ ವಿಶ್ವವಿದ್ಯಾಲಯ ಅಗತ್ಯವಾಗಿ ಬೇಕಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಈ ಬಜೆಟ್‌ನಲ್ಲಿ ಘೋಷಿಸಬಹುದೆ ಎಂಬ ಆಸೆ ಈ ಭಾಗದ ಜನರಿಗಿದೆ.
ಶಿಕಾರಿಪುರ ಜಿಲ್ಲೆಯಾಗಬೇಕೆಂಬ ಮಾತು ಕೇಳಿಬಂದಿದ್ದು, ಅದೀಗ ತಣ್ಣಗಾಗಿದೆ ಆದರೆ ಕಾರವಾರ ಜಿಲ್ಲೆಯ ಶಿರಸಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕೆಂಬ ಬೇಡಿಕೆ ಇದ್ದು, ಈ ದಿಸೆಯಲ್ಲಿ ಸರಕಾರ ಅಲ್ಲಿಗೆ ಹೆಚ್ಚಿನ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬಹುದೇ ಎಂಬ ಬಯಕೆ ಅಲ್ಲಿನ ಜನರದ್ದಾಗಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ಮಲೆನಾಡಿನ ಮಟ್ಟಿಗೆ ತೀವ್ರ ಕುತೂಹಲ ಕೆರಳಿಸಿದೆ.

Ad Widget

Related posts

ಕೊರೊನಾ ಸುಳ್ಳು ಅಂಕಿ ಅಂಶ:ಕೆ.ಬಿ.ಪ್ರಸನ್ನ ಕುಮಾರ್ ಆರೋಪ

Malenadu Mirror Desk

ಆಸ್ತಿ ತೆರಿಗೆ ಹೆಚ್ಚಳ ಮರುಪರಿಶೀಲನೆಗೆ ನಿರ್ಧಾರ

Malenadu Mirror Desk

ಚುನಾವಣೆ ನಿವೃತ್ತಿ ಘೋಷಿಸಿದ ಮೇಲೆ ಪಕ್ಷದಲ್ಲಿ ಹೆಚ್ಚಿದ ಗೌರವ, ಶಿವಮೊಗ್ಗದಲ್ಲಿ ಬಿಜೆಪಿ ಗೆಲುವು : ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.