ಶಿವಮೊಗ್ಗ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದ್ದಾರೆ.
ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಒಟ್ಟು 244 ಪಂಚಾಯಿತಿಗೆ ಚುನಾವಣೆ ನಡೆದಿದೆ. ಇದರಲ್ಲಿ 141 ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಯಾವುದೇ ಮೀಸಲಾತಿ ಬಂದರೂ ನಮ್ಮ ಪಕ್ಷ ಅಧಿಕಾರ ನಡೆಸುತ್ತದೆ. ಜಿಲ್ಲೆಯಲ್ಲಿ ಒಟ್ಟಿ 1508 ಮಂದಿ ನಮ್ಮ ಕಾರ್ಯಕರ್ತರು ಗೆಲವು ಸಾಧಿಸಿದ್ದಾರೆ. ಬುಡಮಟ್ಟದ ಸಂಪರ್ಕ ಜಾಲ ಹೊಂದಿರುವ ಏಕೈಕ ಪಕ್ಷ ಬಿಜೆಪಿ ಹೀಗಾಗಿ ನಾವು ಯಶಸ್ಸು ಸಾಧಿಸಿದ್ದೇವೆ. ಶಿಕಾರಿಪುರದ 2 ಮತ್ತು ತೀರ್ಥಹಳ್ಳಿಯ 7 ಪಂಚಾಯಿತಿಗಳಲ್ಲಿ ಸಮಬಲ ಇದೆ. ಅಲ್ಲಿ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಅಧಿಕಾರ ಹಿಡಿಯುತ್ತೇವೆ. ಭದ್ರಾವತಿಯಲ್ಲಿ ನಮ್ಮ ಸಂಘಟನೆ ಇಲ್ಲ ಎಂಬ ಅಪವಾದ ಈಗ ಹೋಗಿದೆ. ಅಲ್ಲಿನ 250 ಸ್ಥಾನಗಳ ಪೈಕಿ ಬಿಜೆಪಿ 180 ಸ್ಥಾನಕ್ಕೆ ಸ್ಪರ್ಧೆ ಮಾಡಿತ್ತು ಅದರಲ್ಲಿ 66 ಸದಸ್ಯರು ಗೆದ್ದಿದ್ದಾರೆ. ಇದು ಪಕ್ಷ ಮತ್ತು ಸರಕಾರದ ಸಾಧನೆಯಾಗಿದೆ ಎಂದು ಮೇಘರಾಜ್ ಹೇಳಿದರು.
ಗೋಷ್ಟಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಜಿಲ್ಲಾ ಹಾಗೂ ತಾಲೂಕು ಮುಖಂಡರು ಹಾಜರಿದ್ದರು.
previous post
next post