ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದಿನ ಸಾಲಿನ ಆಸ್ತಿ ತೆರಿಗೆ ಮುಂದುವರಿಸಬೇಕೆಂದು ಪಾಲಿಕೆಯ ಕಾಂಗ್ರೆಸ್ ಕಾಪರ್ೋರೇಟರ್ಗಳು ಒತ್ತಾಯಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ವಿರೊಧಪಕ್ಷದ ನಾಯಕ ಎಚ್.ಸಿ.ಯೋಗಿಶ್, ಪಾಲಿಕೆಯಲ್ಲಿ ಶೇ.15 ತೆರಿಗೆ ಹೆಚ್ಚಳ ಮಾಡಲು ನಿರ್ಣಯ ಮಾಡಲಾಗಿದೆ. ಕೊರೊನ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಇಲ್ಲ. ನಾಗರೀಕರು ಆಥರ್ಿಕ ತೊಂದರೆಯಲ್ಲಿರುವಾಗ ಪಾಲಿಕೆ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿದೆ ಎಂದು ಹೇಳಿದರು.
ನಗರದಲ್ಲಿ ಇಪ್ಪತ್ತು ನಾಲ್ಕು ಗಂಟೆ ನೀರು ಪೂರೈಸುವ ಯೋಜನೆ ಸಂಪೂರ್ಣ ವಿಫಲವಾಗಿದೆ. ಮೊದಲಿನ ಹಾಗೆನೂ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಪಾಲಿಕೆ ಈ ಯೋಜನೆಯಡಿ ಮೀಟರ್ ಅಳವಡಿಸುತ್ತಿದ್ದಾರೆ. ಯೋಜನೆ ಪರಿಪೂರ್ಣವಾದ ಬಳಿಕ ಮೀಟರ್ನಂತೆ ಕರವಸೂಲಿ ಮಾಡಲಿ. ಈಗ ಯಾವುದೇ ಕಾರಣಕ್ಕೂ ಮೀಟರ್ ರೀಡಿಂಗ್ ನಂತೆ ಕರವಸೂಲಿ ಬೇಡ ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ನಗರಪಾಲಿಕೆಯು ನಾಗರಿಕರಿಗೆ ಪ್ರೊರೇಟಾ ಶುಲ್ಕ ವಿಧಿಸುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ವಿರೋಧ ಮಾಡುತ್ತದೆ. ಈ ಪದ್ಧತಿ ಅವೈಜ್ಞಾನಿಕವಾಗಿದೆ. ಇದರಿಂದ ನಾಗರೀಕರಿಗೆ ಹೊರೆಯಾಗಲಿದೆ. ಮೊದಲಿನಂತೆಯೇ ತೆರಿಗೆ ಪದ್ಧತಿ ಅಳವಡಿಸಬೇಕು ಎಂದು ಹೇಳಿದರು.
ಅನುದಾನದಲ್ಲಿ ತಾರತಮ್ಯ:
ನಗರಪಾಲಿಕೆಯಲ್ಲಿ ವಿಶೇಷ ಅನುದಾನವನ್ನು ಬಿಜೆಪಿ ಸದಸ್ಯರ ವಾಡರ್ುಗಳಿಗೆ ಮಾತ್ರ ನೀಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಯೋಗಿಶ್ ಹೇಳಿದರು.
ಬಿ.ಎ.ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಆರ್.ಸಿ.ನಾಯ್ಕ, ಯಮುನಾ ರಂಗೇಗೌಡ, ಕಾಶಿ ವಿಶ್ವನಾಥ್, ಮತ್ತಿತರರು ಹಾಜರಿದ್ರು
previous post
next post