ಶುಂಠಿ ಬೆಲೆ ಕುಸಿತದಿಂದ ಕಂಗಾಲಾದ ರೈತನೊಬ್ಬ ಆತ್ಮಹತ್ಯೆಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಮಟ್ಟಿಕೋಟೆಯಲ್ಲಿ ವರದಿಯಾಗಿದೆ.
ಅಶೋಕಪ್ಪ(೪೧) ಆತ್ಮಹತ್ಯೆ ಮಾಡಿಕೊಂಡ ರೈತ. ಅಪಾರ ಸಾಲ ಮಾಡಿದ್ದ ರೈತ ಶುಂಠಿ ಬೆಳೆಯಲ್ಲಿ ಲಾಭ ಬರಬಹುದೆಂದು ನಿರೀಕ್ಷೆ ಮಾಡಿದ್ದ ಆದರೆ ಬೆಲೆ ಕುಸಿತ ಹಾಗೂ ಬೆಳೆನಷ್ಟದಿಂದ ಆತ ನೊಂದಿದ್ದ ಎನ್ನಲಾಗಿದೆ.
ಆತ ಬೆಳೆದಿದ್ದ ಬಾಳೆ ಬೆಳೆಯಿಂದಲೂ ನಷ್ಟವುಂಟಾಗಿತ್ತು ಎನ್ನಲಾಗಿದೆ. ಇದ್ದ ನಾಲ್ಕು ಎಕರೆ ಜಮೀನನ್ನೂ ಮಾರಾಟ ಮಾಡಿದ್ದ ಅಶೋಕಪ್ಪ, ಶಿಕಾರಿಪುರದ ಅರ್ಜುನ್ ಬ್ಯಾಂಕ್‌ನಲ್ಲಿ ೮ ಲಕ್ಷ ,ಶಿವ ಸಹಕಾರಿ ಬ್ಯಾಂಕಿನಲ್ಲಿ ೨ ಲಕ್ಷ ಸೇರಿದಂತೆ ೧೨ ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ಆತನ ಸಂಬಂಧಿಗಳೂ ತಿಳಿಸಿದ್ದಾರೆ. ಬೆಳೆ ನಷ್ಟದಿಂದ ಬೇಸತ್ತ ಅಶೋಕಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಶಿಕಾರಿಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
previous post
next post