Malenadu Mitra
ಬೇಸಾಯರಾಜ್ಯಶಿಕಾರಿಪುರ

ಬೆಲೆಕುಸಿತ:ಶುಂಠಿ ಬೆಳೆಗಾರ ಆತ್ಮಹತ್ಯೆ

ಶುಂಠಿ ಬೆಲೆ ಕುಸಿತದಿಂದ ಕಂಗಾಲಾದ ರೈತನೊಬ್ಬ ಆತ್ಮಹತ್ಯೆಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಮಟ್ಟಿಕೋಟೆಯಲ್ಲಿ ವರದಿಯಾಗಿದೆ.
ಅಶೋಕಪ್ಪ(೪೧) ಆತ್ಮಹತ್ಯೆ ಮಾಡಿಕೊಂಡ ರೈತ. ಅಪಾರ ಸಾಲ ಮಾಡಿದ್ದ ರೈತ ಶುಂಠಿ ಬೆಳೆಯಲ್ಲಿ ಲಾಭ ಬರಬಹುದೆಂದು ನಿರೀಕ್ಷೆ ಮಾಡಿದ್ದ ಆದರೆ ಬೆಲೆ ಕುಸಿತ ಹಾಗೂ ಬೆಳೆನಷ್ಟದಿಂದ ಆತ ನೊಂದಿದ್ದ ಎನ್ನಲಾಗಿದೆ.
ಆತ ಬೆಳೆದಿದ್ದ ಬಾಳೆ ಬೆಳೆಯಿಂದಲೂ ನಷ್ಟವುಂಟಾಗಿತ್ತು ಎನ್ನಲಾಗಿದೆ. ಇದ್ದ ನಾಲ್ಕು ಎಕರೆ ಜಮೀನನ್ನೂ ಮಾರಾಟ ಮಾಡಿದ್ದ ಅಶೋಕಪ್ಪ, ಶಿಕಾರಿಪುರದ ಅರ್ಜುನ್ ಬ್ಯಾಂಕ್‌ನಲ್ಲಿ ೮ ಲಕ್ಷ ,ಶಿವ ಸಹಕಾರಿ ಬ್ಯಾಂಕಿನಲ್ಲಿ ೨ ಲಕ್ಷ ಸೇರಿದಂತೆ ೧೨ ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ಆತನ ಸಂಬಂಧಿಗಳೂ ತಿಳಿಸಿದ್ದಾರೆ. ಬೆಳೆ ನಷ್ಟದಿಂದ ಬೇಸತ್ತ ಅಶೋಕಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಶಿಕಾರಿಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Ad Widget

Related posts

ಸೊನಲೆಯಲ್ಲಿ ಸಂಪನ್ನಗೊಂಡ ಅಮ್ಮನ ಹಬ್ಬ, ಸಹಸ್ರಾರು ಸಂಖೆಯಲ್ಲಿ ನೆರೆದ ಜನ ಸಮೂಹ, ಸ್ವಾಮಿರಾವ್ ಕುಟುಂಬದಿಂದ ಆತ್ಮೀಯ ಆತಿಥ್ಯ

Malenadu Mirror Desk

ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ , ಏಪ್ರಿಲ್ 21ರಂದು ಸರಕಾರಿ ನೌಕರರ ದಿನಾಚರಣೆ

Malenadu Mirror Desk

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆ ಗೌಣ, ನನ್ನ ಮತ್ತು ಘುಪತಿ ಭಟ್‌ ನಡುವೆ ನೇರ ಹಣಾಹಣಿ : ಎಸ್‌.ಪಿ.ದಿನೇಶ್‌ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.