Malenadu Mitra
ರಾಜ್ಯ ಶಿವಮೊಗ್ಗ ಹೊಸನಗರ

ಗುತ್ತಿಗೆದಾರರಿಗೆ ಶಾಸಕ ಹಾಲಪ್ಪ ಕ್ಲಾಸ್

ಸಾಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಅಭಿವೃದ್ದಿ ಕಾಮಗಾರಿಗೆ ಸರ್ಕಾರ ಟೆಂಡರ್ ಕರೆದಿದ್ದು ಗುತ್ತಿಗೆದಾರರು ಕಡಿಮೆ ದರ ಹಾಕಿ ಗುತ್ತಿಗೆ ಪಡೆದು ಕಾಮಗಾರಿಯಲ್ಲಿ ತೇಪೆ ಹಚ್ಚಿ ಕಳಪೆ ಮಾಡುವ ಬದಲು ಹೆಚ್ಚಿನ ದರ ಹಾಕಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಶಾಸಕ ಹಾಗೂ ಎಂ.ಎಸ್.ಐ.ಎಲ್.ಅಧ್ಯಕ್ಷ ಹರತಾಳು ಹಾಲಪ್ಪ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬುಲ್ಡೆಜರ್ ಗುಡ್ಡದ ಬಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಸೋಮವಾರ ಸುಮಾರು ಐವತ್ತು ಲಕ್ಷ ರೂ ವೆಚ್ಚದ
ಶಾಂತಪುರ ಪಿಕ್‌ಅಪ್ ಕಾಂಕ್ರೇಟ್ ಚಾನಲ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಾರ್ವಜನಿಕರ ಮನವಿಯಂತೆ ಸಣ್ಣ ನೀರಾವರಿ ಇಲಾಖೆಯಡಿ ೫೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೇಟ್ ಚಾನಲ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡಲಾಗಿದ್ದು ಟೆಂಡರ್ ಸಹ ಕರೆಯಲಾಗಿ ಕಾಮಗಾರಿ ಪ್ರಾರಂಭಿಸಲು ಚಾಲನೆ ನೀಡಲಾಗಿದೆ .ಸಾರ್ವಜನಿಕರು ಕಾಮಗಾರಿಯ ಗುಣಮಟ್ಟವನ್ನು ಅಗಾಗ ಪರಿಶೀಲನೆ ನಡೆಸುವ ಮೂಲಕ ಸಂಬಂಧಿಸಿದವರ ಗಮನಕ್ಕೆ ತರಬೇಕು ಕಾಮಗಾರಿ ಹತ್ತಾರು ವರ್ಷ ಬಾಳಿಕೆ ಬರವುಂತಾಗಬೇಕು ಕಾಮಗಾರಿ ಹಂತದಲ್ಲಿ ಕಿತ್ತು ಹೋಗದೆ ಶಾಶ್ವತವಾಗಿ ಬಾಳಿಕೆ ಬರುವಂತಾಗಲು ಸರ್ಕಾರದಿಂದ ಹೆಚ್ಚಿ ಹಣ ಬಿಡುಗಡೆ ಮಾಡಿಸುವುದಾಗಿ ಹೇಳಿ ತಾವು ಗುತ್ತಿಗೆ ಪಡೆಯಲು ಕಡಿಮೆ ಮೊತ್ತದ ಟೆಂಡರ್ ಹಾಕದೇ ಹೆಚ್ಚಿನ ಮೊತ್ತದಲ್ಲಿ ಟೆಂಡರ್ ಹಾಕಿ ಗುಣಮಟ್ಟದಲ್ಲಿ ಹತ್ತಾರು ವರ್ಷಗಳ ಕಾಲ ಉಳಿಯುವಂತೆ ಮಾಡುವುದು ಅಗತ್ಯವೆಂದು ಹೇಳಿ ಈ ಕಾಮಗಾರಿ ನಿರ್ವಹಣೆಯ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರ ದೂರಗಳು ಬಂದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ್ ಸ್ವಾಮಿರಾವ್,ಕೋಡೂರು ಗ್ರಾಮ ಪಂಚಾಯ್ತಿ ಸದಸ್ಯ ಜೈಪ್ರಕಾಶ್‌ಶೆಟ್ಟಿ,ತಹಶೀಲ್ದಾರ್ ರಾಜೀವ್,ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶೇಷಪ್ಪ,ತಾ.ಪಂ.ಇಓ ಪ್ರವೀಣ್,ಕೆರೆಹಳ್ಳಿ-ಹುಂಚಾ ಹೋಬಳಿಯ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್,ಅರ್.ಟಿ.ಗೋಪಾಲ, ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Ad Widget

Related posts

ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ತರಬೇತಿ

Malenadu Mirror Desk

ಶಿವಮೊಗ್ಗ ಮಾರಿಕಾಂಬೆ ಜಾತ್ರೆಗೆ ಅದ್ದೂರಿ ಚಾಲನೆ, ದೇವಿ ದರ್ಶನಕ್ಕೆ ನೆರೆದ ಭಕ್ತ ಸಾಗರ

Malenadu Mirror Desk

ಟೈಲರ್ ಕನ್ನಯ್ಯ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.